Publish Date: Fri, 24 May 2019 (14:53 IST)
Updated Date: Fri, 24 May 2019 (14:58 IST)
ಬಾವಿಯಲ್ಲಿ ಆಯತಪ್ಪಿ ಬಿದ್ದಿದ್ದ ವೃದ್ಧೆಯೊಬ್ಬರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಹೊರ ಭಾಗದ ತೋಟದಲ್ಲಿನ ಬಾವಿಯಲ್ಲಿ ಈ ಘಟನೆ ನಡೆದಿದೆ.
85 ವರ್ಷದ ತಂಗೆವ್ವ ಗದ್ಯಾಳ ಬಾವಿಯಲ್ಲಿ ಬಿದ್ದಿದ್ದ ವೃದ್ಧೆ. ಬಾವಿಯಲ್ಲಿ ಬಿದ್ದ ಬಳಿಕ ಪೈಪ್ ಹಿಡಿದುಕೊಂಡು ನಿಂತಿದ್ದರು ವೃದ್ಧೆ ತಂಗೆವ್ವ. ಆ ಬಳಿಕ ಮನೆಯವರು ನೋಡಿ ಸ್ಥಳೀಯರ ಸಹಾಯದಿಂದ ವೃದ್ಧೆಯ ರಕ್ಷಣೆ ಮಾಡಿದ್ದಾರೆ.
65 ಅಡಿ ಆಳದ ಬಾವಿಯಲ್ಲಿ 15 ಅಡಿ ನೀರು ತುಂಬಿತ್ತು. ರಕ್ಷಣೆ ಬಳಿಕ ವೃದ್ಧೆಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ವೃದ್ಧೆ ಆರೋಗ್ಯ ಸ್ಥಿರವಾಗಿದ್ದು, ಬದುಕಿ ಬಂದಿರುವುದಕ್ಕೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.