Publish Date: Fri, 24 May 2019 (14:42 IST)
Updated Date: Fri, 24 May 2019 (14:44 IST)
ದುರ್ಗದ ನಗರದಿಂದ ಕಮಲ ಪಾಳೆಯದ ಅಭ್ಯರ್ಥಿ ಲೋಕ ಸಮರದಲ್ಲಿ ಗೆಲುವು ಸಾಧಿಸಿರುವುದಕ್ಕೆ ರಾಜ್ಯದ ಗಡಿ ಭಾಗದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಯಣಸ್ವಾಮಿ ಜಯಭೇರಿ ಹಿನ್ನಲೆಯಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ರು. ನಾರಾಯಣಸ್ವಾಮಿ ಯವರ ಸ್ವಕ್ಷೇತ್ರ ಆನೇಕಲ್ ಗೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಗೆಲುವು ದಾಖಲು ಮಾಡಿದ್ದಾರೆ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ.
ಆನೇಕಲ್ ಪಟ್ಟಣದ ನೆಚ್ಚಿನ ನಾಯಕನ ಗೆಲುವಿಗೆ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಲಾಗಿದೆ. ನೂರಾರು ಜನ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳ ಜೊತೆ ನೂತನ ಸಂಸದ ರ್ಯಾಲಿ ನಡೆಸಿದ್ರು. ಆನೇಕಲ್ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಭಿಮಾನಿಗಳ ಜೊತೆ ರ್ಯಾಲಿ ಸಾಗಿತು.