Publish Date: Thu, 23 May 2019 (17:11 IST)
Updated Date: Thu, 23 May 2019 (17:16 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧನೆಗಾಗಿ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.
‘ಬಿಜೆಪಿಗೆ ಇಂಥ ಜಯ ದಾಖಲಿಸಿಕೊಟ್ಟ ನರೇಂದ್ರ ಭಾಯಿ ಮೋದಿ ಅವರಿಗೆ ಅಭಿನಂದನೆಗಳು. ಬಿಜೆಪಿ ಅಧ್ಯಕ್ಷ ಅಮಿತ್ ಭಾಯಿ ಶಾ ಮತ್ತು ಬಿಜೆಪಿಯ ಸಂದೇಶ ಎಲ್ಲರಿಗೂ ತಲುಪುವಂತೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ನಮನಗಳು’ ಎಂದು ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
ಸಂಪೂರ್ಣ ಬಹುಮತದೊಂದಿಗೆ ಎನ್ ಡಿಎ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.