Select Your Language

Notifications

webdunia
webdunia
webdunia
webdunia

ಹತ್ತಾರು ಆನೆಗಳು ಪ್ರತ್ಯಕ್ಷವಾಗಿದ್ದು ಎಲ್ಲಿ ಗೊತ್ತಾ?

ಹತ್ತಾರು ಆನೆಗಳು ಪ್ರತ್ಯಕ್ಷವಾಗಿದ್ದು ಎಲ್ಲಿ ಗೊತ್ತಾ?
ಚಿಕ್ಕಮಗಳೂರು , ಸೋಮವಾರ, 24 ಡಿಸೆಂಬರ್ 2018 (16:26 IST)
ಏಕಾಏಕಿಯಾಗಿ ಹತ್ತಕ್ಕೂ ಹೆಚ್ಚು ಆನೆಗಳು ಪ್ರತ್ಯಕ್ಷಗೊಂಡು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯದಲ್ಲಿ ಹತ್ತಕ್ಕೂ ಹೆಚ್ಚು ಆನೆಗಳು ಪ್ರತ್ಯಕ್ಷವಾಗಿವೆ. ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಗಜಪಡೆಗಳ ದೃಶ್ಯ ಸೆರೆಯಾಗಿವೆ.  

ಗಜಪಡೆಯ ಗಾಂಭೀರ್ಯವನ್ನು ಕಂಡು ಖುಷಿಯಾದ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಆನೆಗಳ ಗುಂಪಿನ ಜೊತೆ ಕಾಡೆಮ್ಮೆಗಳು ಸಹ ಪ್ರತ್ಯಕ್ಷವಾಗಿವೆ.

ಚಿಕ್ಕಮಗಳೂರು ಜಿಲ್ಲೆ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಈ ಚಿತ್ರಣ ಕಂಡು ಬಂದಿದೆ.
ಇತ್ತೀಚೆಗೆ ಆನೆಗಳ‌ ಸಂಖ್ಯೆ ಹೆಚ್ಚಳವಾದ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ