Publish Date: Thu, 13 Dec 2018 (18:11 IST)
Updated Date: Thu, 13 Dec 2018 (18:13 IST)
ಒಂದೇ ಹುತ್ತದೊಳಗೆ ಎರಡು ನಾಗರಹಾವು ಕಾಣಿಸಿಕೊಂಡಿರೋ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಈ ಘಟನೆ ನಡೆದಿದೆ.
ಕೊಟ್ಟಿಗೆಹಾರದ ರಿಚರ್ಡ್ ಲೋಬೋ ಎಂಬುವರ ಕಾಫಿ ತೋಟದಲ್ಲಿರುವ ಹುತ್ತದಲ್ಲಿ ಎರಡು ನಾಗರಹಾವುಗಳು ಕಾಣಿಸಿಕೊಂಡಿವೆ. ಎರಡು ನಾಗರಹಾವು ಕಂಡು ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ಭಯಗೊಂಡಿದ್ದರು.
ತೋಟದ ಮಾಲೀಕರು, ಉರಗ ತಜ್ಞ ಆರೀಫ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಆರೀಫ್ ಎರಡು ನಾಗರ ಹಾವುಗಳನ್ನು ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.