Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ನಿಲ್ಲದ ಆನೆಗಳ ಪುಂಡಾಟಿಕೆ!

ಗಡಿಯಲ್ಲಿ ನಿಲ್ಲದ ಆನೆಗಳ ಪುಂಡಾಟಿಕೆ!
ಆನೇಕಲ್ , ಗುರುವಾರ, 13 ಡಿಸೆಂಬರ್ 2018 (17:35 IST)
ಕರ್ನಾಟಕ- ತಮಿಳುನಾಡು ಗಡಿಯಲ್ಲಿ ಆನೆಗಳ ಹಾವಳಿ ನಿಲ್ಲುತ್ತಿಲ್ಲ.
ಕರ್ನಾಟಕ ತಮಿಳುನಾಡು ಗಡಿಯಲ್ಲಿ ಆನೆಗಳ ಹಾವಳಿ ಮಿತಿಮೀರುತ್ತಿದೆ. ಇಂದು ಮುಂಜಾನೆ ತೋಟಕ್ಕೆ ನುಗ್ಗಿದ 2 ಕಾಡಾನೆಗಳು ಬೆಳೆಯನ್ನು ನಾಶಪಡಿಸಿವೆ.

ಆನೇಕಲ್ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಸುಳಗಿರಿ ಸಮೀಪದ ಪತ್ತಕೋಟ ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳಿಂದಾಗಿ ಅಲ್ಲಿನ ಜನರು ಹಾಗೂ ಬೆಳೆಗಾರರು ಆತಂಕದಲ್ಲಿದ್ದಾರೆ. 
ಕಳೆದ 2 ದಿನಗಳಲ್ಲಿ ಒಂದು ಹಸು ಹಾಗೂ ಓರ್ವ ವೃದ್ಧ ಆನೆಗಳ ದಾಳಿಗೆ ಬಲಿಯಾಗಿವೆ.

ಇಂದು ಸಹ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿರುವ ಆನೆಗಳ ದಾಳಿಯಿಂದ ಜನರು ಗಾಬರಿಗೊಂಡಿದ್ದಾರೆ. ಆನೆಗಳನ್ನು ಅರಣ್ಯಕ್ಕೆ ಓಡಿಸಲು ತಮಿಳುನಾಡು ಅರಣ್ಯ ಇಲಾಖೆ ವಿಫಲವಾಗಿದೆ ಹೀಗಾಗಿ ತಮಿಳುನಾಡು ಅರಣ್ಯ ಇಲಾಖೆ ವಿರುದ್ಧ  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳಿಂದ ಪ್ರತಿಭಟನೆ: ಶಿಕ್ಷಣ ಸಚಿವರ ನೇಮಕಕ್ಕೆ ಒತ್ತಾಯ