ಪಾಲಿಬೆಟ್ಟದಲ್ಲಿರುವ ಮಸ್ಕಲ್ ಕಾಫಿ ತೋಟದಲ್ಲಿ ಕಳೆದ 50 ವರ್ಷಗಳಿಂದ ಕೆಲಸ ಮಾಡುತ್ತಿದ್ದವರವನ್ನು ಹೊರಹೋಗದಂತೆ ಗೇಟ್ ಲಾಕ್ ಮಾಡಲಾಗಿದೆ.
									
			
			 
 			
 
 			
					
			        							
								
																	ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ತೋಟದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.  
									
										
								
																	ಕೊಡಗು ಜಿಲ್ಲೆಯಲ್ಲಿ  ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಮಸ್ಕಲ್ ಕಾಫಿ ತೋಟದಲ್ಲಿ ಪ್ರತಿಭಟನೆ ನಡೆಯುತ್ತಿದೆ.  
ಬೆಳಗಿನಿಂದ  ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿರುವ ಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಕೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.
									
											
							                     
							
							
			        							
								
																	ಕಳೆದ 50 ವರ್ಷಗಳಿಂದಲೂ ಕಾಯಂ  ಕೆಲಸ ಮಾಡುತ್ತಿರುವ ಐವತ್ತಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳು ಪ್ರತಿಭಟನೆಯಲ್ಲಿ  ತೊಡಗಿವೆ. ಆದರೆ ಮಕ್ಕಳು ಹಾಗೂ  ಕಾರ್ಮಿಕರನ್ನು ಹೊರ ಹೋಗದಂತೆ ಗೇಟ್ ಲಾಕ್ ಮಾಡಲಾಗಿದೆ.
									
			                     
							
							
			        							
								
																	ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ಕಾರ್ಮಿಕರು, ತೋಟದ ಲೈನ್ ಮನೆಗಳಲ್ಲೂ ಮೂಲ ಸೌಕರ್ಯ  ಕೊರತೆ ಇದೆ ಆರೋಪ ಮಾಡುತ್ತಿದ್ದಾರೆ. ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.