Publish Date: Wed, 05 Dec 2018 (19:07 IST)
Updated Date: Wed, 05 Dec 2018 (19:09 IST)
ಲಂಚ ಬಾಕ ಅಧಿಕಾರಿಯ ವಿರುದ್ಧ ನ್ಯಾಯವಾದಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.
ಲಂಚ ಬಾಕ ಅಧಿಕಾರಿಯ ಆಕ್ರೋಶ ವ್ಯಕ್ತವಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ನ್ಯಾಯವಾದಿಗಳನ್ನು ನೀವೇನು ಸಾಚಾಗಳಾ? ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ. ಈ ವೇಳೆ ಅಧಿಕಾರಿಯ ನಡೆ ಖಂಡಿಸಿ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಹಸೀಲ್ದಾರ ಕಚೇರಿಯಲ್ಲಿರುವ ಸಬ್ ರಿಜಿಸ್ಟ್ರಾರ್ ಪಿ. ಧನುರಾಜ್ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ.
ಪ್ರತಿ ಫೈಲ್ ಗೆ ಸಹಿ ಹಾಕಲು ಹೆಚ್ಚುವರಿ ಹಣ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿ ಸಿ ಕ್ಯಾಮರಾ ಅಳವಡಿಸದೆ ಮನಸೋ ಇಚ್ಛೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಸಬ್ ರಿಜಿಸ್ಟ್ರಾರ್ ವಿರುದ್ಧ ಸಾರ್ವಜನಿಕರು ಮತ್ತು ವಕೀಲರಿಂದ ತರಾಟೆ ತೆಗೆದುಕೊಂಡಿದ್ದಾರೆ.