Publish Date: Wed, 05 Dec 2018 (17:52 IST)
Updated Date: Wed, 05 Dec 2018 (18:00 IST)
ನಂದಿಬೆಟ್ಟದ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ವೇಗವಾಗಿ ಹೋಗುತ್ತಿದ್ದ ಮಾರುತಿ ಓಮ್ನಿ ವ್ಯಾನ್ ಮುಂದೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ 7 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ದೇವನಹಳ್ಳಿಯ ಬಳಿ ಮಧ್ಯರಾತ್ರಿ ಘಟನೆ ನಡೆದಿದೆ.
ಆರ್.ಟಿ ನಗರದ ಚೋಳನಾಯ್ಕನಪಾಳ್ಯದ ಸುಂದರ್ (೨೫), ವೆಂಕಟೇಶ್(೨೮) ಸತೀಶ್ (೨೪), ವಿಕಾಸ್(೨೩) ಮೃತಪಟ್ಟವರು, ಗಾಯಗೊಂಡಿರುವ ವ್ಯಾನ್ ಚಾಲಕ ಹೇಮಂತ್, ಅಜೀತ್, ರವಿ,ಭರತ್,ಅವಿನಾಶ್, ಮಧು ಹಾಗೂ ಮನೋಜ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೂವಿನ ಅಲಂಕಾರ ಮಾಡುವ ಕೆಲಸ ಮಾಡುತ್ತಿದ್ದ ಮೃತ ನಾಲ್ವರು ಗಾಯಗೊಂಡಿರುವ ಹೇಮಂತ್, ಅಜೀತ್, ರವಿ,ಭರತ್,ಅವಿನಾಶ್ ಸೇರಿ 9 ಮಂದಿ ಮಾರುತಿ ವ್ಯಾನ್ ನಲ್ಲಿ ನಂದಿಬೆಟ್ಟದ ಕಡೆಗೆ ರಾತ್ರಿ 12.30ರ ವೇಳೆ ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಾ ಮುಂದೆ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಢಿಕ್ಕಿಯ ರಭಸಕ್ಕೆ ಸುಂದರ್, ವೆಂಕಟೇಶ್, ಸತೀಶ್, ವಿಕಾಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇತರ ಐವರು ಗಾಯಗೊಂಡಿದ್ದಾರೆ.