Publish Date: Tue, 04 Dec 2018 (13:57 IST)
Updated Date: Tue, 04 Dec 2018 (13:59 IST)
ಅಂಗಳದಲ್ಲಿ ಕಾಳು ತಿನ್ನುತ್ತಿದ್ದಾಗ ಕೋಳಿಯ ಎದುರಿಗೆ ಬಂದ ಹಾವನ್ನು ಕೋಳಿಯೊಂದು ತಕ್ಷಣ ತಿಂದ ಘಟನೆ ನಡೆದಿದೆ.
ಹಾವುಗಳು ಕೋಳಿಯನ್ನು ತಿನ್ನುವುದು ಕಾಮನ್. ಆದರೆ ಕೋಳಿಯೇ ಹಾವನ್ನು ತಿಂದ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಘಟನೆ ನಡೆದಿದೆ.
ಅಂಗಳದಲ್ಲಿ ಕಾಳು ತಿನ್ನುತ್ತಿದ್ದಾಗ ಕೋಳಿಯ ಎದುರಿಗೆ ಬಂದ ಹಾವಿನ ಮರಿಯನ್ನು ಕೋಳಿ ತಿಂದಿದೆ. ತಕ್ಷಣ ಹಾವಿನ ತಲೆಯನ್ನು ಕುಕ್ಕಿ ಕುಕ್ಕಿ ಕೋಳಿ ನುಂಗಿದೆ.
ಕೆಲ ಸೆಕೆಂಡುಗಳಲ್ಲಿಯೇ ಹಾವನ್ನು ಸ್ವಾಹಾ ಮಾಡಿದೆ ಕೋಳಿ. ಕೋಳಿಯು ಹಾವನ್ನು ನುಂಗುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಹಾವು ಕೋಳಿಯನ್ನು ನುಂಗೋದು ಸಾಮಾನ್ಯ ಆದರೆ ಹಾವನ್ನೇ ಕೋಳಿ ತಿಂದರೂ ಜೀವಂತವಾಗಿರೋದ ಅಚ್ಚರಿಗೆ ಕಾರಣವಾಗಿದೆ.