Select Your Language

Notifications

webdunia
webdunia
webdunia
webdunia

ವ್ಯಾಪಕ ಹಗರಣಕ್ಕೆ ಖಂಡನೆ: 7ನೇ ದಿನಕ್ಕೆ ಮುಂದುವರಿದ ಸತ್ಯಾಗ್ರಹ

ಅವ್ಯವಹಾರ
ವಿಜಯಪುರ , ಶುಕ್ರವಾರ, 7 ಡಿಸೆಂಬರ್ 2018 (17:04 IST)
ವ್ಯಾಪಕ ಹಗರಣಗಳ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ.

ವಿಜಯಪುರದ ಸಿಂದಗಿ ತಾಲೂಕ ಪಂಚಾಯತಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಏಳಕ್ಕೆ ದಿನಕ್ಕೆ ಕಾಲಿಟ್ಟಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮ ಪಂಚಾಯತಿಯಲ್ಲಿ ವ್ಯಾಪಕ ಹಗರಣಗಳನ್ನು ಖಂಡಿಸಿ,  ತಾಲೂಕ ಪಂಚಾಯತ ವಿರುದ್ಧ ಪ್ರತಿಭಟನೆ ಮುಂದುವರಿದಿದೆ.

ವಿವಿಧ ವಸತಿ ಯೋಜನೆ, ಶೌಚಾಲಯ, 14ನೇ ಹಣಕಾಸಿನಲ್ಲಿ ಸುಮಾರು  80 ರಿಂದ 90 ಲಕ್ಷ ರೂ. ಹಣ ಕ್ರೀಯಾ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ.  

ಪಂಚಾಯತದ ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರು ಹಣ ದುರುಪಯೋಗ ಮಾಡಿದ್ದಾರೆಂದು ಗ್ರಾಮಸ್ಥರು ಮತ್ತು ಗ್ರಾ. ಪಂ. ಸದಸ್ಯರು ಆರೋಪಿಸಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ. ಪ್ರತಿಭಟನಾ ಸ್ಥಳಕೆ ಯಾವ ಅಧಿಕಾರಿಗಳು ಭೇಟಿ ನೀಡದ ಹಿನ್ನಲೆಯಲ್ಲಿ CS ಮತ್ತು Eo ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲ ಅಧಿವೇಶನಕ್ಕೂ ಮುನ್ನ ದೇವರ ಮೊರೆ ಹೋದ ಸಿಎಂ