Select Your Language

Notifications

webdunia
webdunia
webdunia
webdunia

ಶೌಚಾಲಯ ನಿರ್ಮಾಣಕ್ಕಾಗಿ ನಡೆಯಿತು ವಿನೂತನ ಪ್ರತಿಭಟನೆ

ಶೌಚಾಲಯ ನಿರ್ಮಾಣಕ್ಕಾಗಿ ನಡೆಯಿತು ವಿನೂತನ ಪ್ರತಿಭಟನೆ
ಬಾಗಲಕೋಟೆ , ಬುಧವಾರ, 5 ಡಿಸೆಂಬರ್ 2018 (19:16 IST)
ಶೌಚಾಲಯ ನಿರ್ಮಾಣಕ್ಕಾಗಿ ಧನ ಸಹಾಯ ನೀಡುವಂತೆ ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆದಿದೆ.

ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದಲ್ಲಿಂದು ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ನೀಡುವಂತೆ ಆಗ್ರಹಿಸಿ ಕೈಯಲ್ಲಿ ಚೆಂಬು ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ರಬಕವಿ -ಬನಹಟ್ಟಿ ತಾಲೂಕಿನ ಪಿಡಿ ಬುದ್ನಿ ಗ್ರಾಮದ ಗ್ರಾಮಸ್ಥರು ಕೈಯಲ್ಲಿ ಚೆಂಬು ಹಿಡಿದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ತೃತೀಯ ಲಿಂಗಿಗೆ ರಾಜ್ಯದ ಮೊದಲ ಸರಕಾರಿ ನೌಕರಿ