ಬೆಂಗಳೂರು: ಗೃಹಲಕ್ಷ್ಮಿ ಫೆಬ್ರವರಿ ತಿಂಗಳ ಹಣ ಯಾವಾಗ ಬರಲಿದೆಎಂದು ಕಾಯುತ್ತಿದ್ದವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪಗಳಿವೆ. ಈ ನಡುವೆ ಜನವರಿ ತಿಂಗಳ ಹಣ ಮೊನ್ನೆ ಯುಗಾದಿಗೆ ಸಂದಾಯವಾಗಿದೆ. ಈ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಜನವರಿ ತಿಂಗಳ ಹಣ ಈಗಾಗಲೇ ಪಾವತಿ ಮಾಡಿದ್ದೇವೆ. ನಾನೇ ಖುದ್ದಾಗಿ ಖಚಿತಪಡಿಸಿದ್ದೇನೆ. ಪ್ರತಿಯೊಬ್ಬರ ಖಾತೆಗೂ ಹಣ ಹಾಕಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಿದ್ದರೆ ಫೆಬ್ರವರಿ ತಿಂಗಳ ಹಣ ಯಾವಾಗ ಬರುತ್ತದೆ ಎಂದು ಕೇಳಿದ್ದಕ್ಕೂ ಅವರು ಉತ್ತರ ನೀಡಿದ್ದಾರೆ.
ಫೆಬ್ರವರಿ ತಿಂಗಳ ಹಣ ಏಪ್ರಿಲ್ ಎರಡನೇ ವಾರದಲ್ಲಿ ಸಂದಾಯ ಮಾಡುತ್ತೇವೆ. ಈಗಾಗಲೇ ಹಣಕಾಸು ಇಲಾಖೆಯಿಂದ ನಮ್ಮ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಖಾತೆಗೆ 2,500 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ಎರಡನೇ ವಾರದಲ್ಲೇ ಹಾಕ್ತೀವಿ ಎಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.