ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬೆಳಗಾವಿ ಅಧಿವೇಶನದಲ್ಲಿ ಅಶ್ಲೀಲ ಪದ ಪ್ರಯೋಗಿಸಿ ನಿಂದಿಸಿದ ಪ್ರಕರಣದ ಬಳಿಕ ಬಿಜೆಪಿ ಶಾಸಕ ಸಿಟಿ ರವಿ ಮತ್ತೆ ಬೆಳಗಾವಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಏನಂದ್ರು ಗೊತ್ತಾ?
ಇಂದು ಬೆಳಗಾವಿಗೆ ಭೇಟಿ ನೀಡಿದ ಸಿಟಿ ರವಿ ಕಪಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಂದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಅಂದು ಸಿಟಿ ರವಿಯವರನ್ನು ಅಧಿವೇಶನ ನಡೆಯುತ್ತಿರುವಾಗಲೇ ಬಂಧಿಸಿ ಬೇಂಗಳೂರಿಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅವರು ಇಂದು ಇದೇ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ್ದಾರೆ.
ತಮ್ಮ ಪತ್ನಿ ಜೊತೆ ಬೆಳಗಾವಿಗೆ ಬಂದ ಸಿಟಿ ರವಿ ಕಪಿಲೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅಂದು ಕಹಿ ಘಟನೆಯಾದಾಗ ಕಾರ್ಯಕರ್ತರು ಹರಕೆ ಹೊತ್ತಿದ್ದರು. ಅದನ್ನು ತೀರಿಸಲು ಬಂದಿರುವುದಾಗಿ ಹೇಳಿದ್ದಾರೆ. ದೇವಾಲಯದ ಜಲಾಭಿಷೇಕ ನಡೆಸಿದ್ದು ನನ್ನೊಳಗಿನ ಕೆಟ್ಟ ಗುಣಗಳು ನಾಶವಾಗಲಿ, ನಮ್ಮಿಂದ ಯಾರಿಗೂ ಕೆಟ್ಟದ್ದು ಆಗುವುದು ಬೇಡ ಎಂದು ಪ್ರಾರ್ಥನೆ ನಡೆಸಿರುವುದಾಗಿ ಹೇಳಿದ್ದಾರೆ.