ಬೆಳಗಾವಿ: ಕರ್ನಾಟಕ ಸಾರಿಗೆ ಬಸ್ ನ ಕಂಡಕ್ಟರ್ ಮೇಲೆ ಮರಾಠಿ ಪುಂಡರ ದಾಳಿ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಗುಂಪು ಹಲ್ಲ ನಡೆಸಿತ್ತು. ಘಟನೆ ಈಗ ಎರಡೂ ರಾಜ್ಯಗಳ ನಡುವಿನ ತಿಕ್ಕಾಟವಾಗಿ ಮಾರ್ಪಟ್ಟಿದೆ.
ಘಟನೆ ಬಗ್ಗೆ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದರು. ಮೊದಲನೆಯದಾಗಿ ಇಂತಹ ಘಟನೆಗಳನ್ನು ಅತ್ಯಂತ ಕಠಿಣ ಶಬ್ಧದಿಂದ ನಾನು ಖಂಡಿಸುತ್ತೇನೆ. ಘಟನೆ ನಡೆದ ಐದೇ ನಿಮಿಷಕ್ಕೆ ನಾನು ಕಮಿಷನರ್ ಗೆ ಫೋನ್ ಮಾಡಿ ಘಟನೆಯ ವಿವರನ್ನು ಪಡೆದುಕೊಂಡು ತಪ್ಪಿತಸ್ಥರಿದ್ದಾರೆ ಅವರನ್ನು ಅರೆಸ್ಟ್ ಮಾಡುವಂತೆ ಡೈರೆಕ್ಷನ್ ಕೊಟ್ಟಿದ್ದೇನೆ.
ಈವತ್ತು ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದೇನೆ. ಈವತ್ತು ನಾವು ಸ್ವರಾಜ್ಯವೆಂಬ ಪರಿಕಲ್ಪನೆಯನ್ನು ಆಚರಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಒಂದೆರಡು ಪುಂಡರು ಭಾಷೆ ಹೆಸರು ಹೇಳಿಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ನಾನು ಖಂಡಿಸುತ್ತೇನೆ.