ಇಂಜಿನಿಯರಿಂಗ್ ಎಕ್ಸಾಮ್ ಮುಗಿದ ದಿನವೇ ವಿದ್ಯಾರ್ಥಿಗಳು ಮಾಡಿದ್ದೇನು?

ಗುರುವಾರ, 6 ಜೂನ್ 2019 (18:14 IST)
ಇಜಿನೀಯರಿಂಗ್ ಕೊನೆ ಎಕ್ಸಾಮ್ ಮುಗಿದಿದ್ದಕ್ಕೆ ವಿದ್ಯಾರ್ಥಿಗಳು ಹೀಗೆಲ್ಲಾ ಮಾಡಿದ್ದಾರೆ.

ಇಜಿನೀಯರಿಂಗ್ ಕೊನೆ ಎಕ್ಸಾಮ್ ಮುಗಿದಿದ್ದಕ್ಕೆ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ್ದಾರೆ ಇಂಜಿನೀಯರಿಂಗ್ ವಿದ್ಯಾರ್ಥಿಗಳು. ಕಾಯಿ ಒಡೆದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ ವಿದ್ಯಾರ್ಥಿಗಳು. ಹೀರಾಶುಗರ್ ಇನ್ಸಟೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಹೀಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿ‌ನ ನಿಡಸೋಶಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಹರ್ಷೋದ್ಘಾರ ಜೋರಾಗಿತ್ತು.
ಬಿಇ ಕೊನೆಯ ಎಕ್ಸಾಂ ಮುಗಿದಿದ್ದಕ್ಕೆ ರಾಜಕಾರಣಿಗಳಂತೆ ಬಣ್ಣ ಎರಚಿ ಖುಷಿಪಟ್ಟಿದ್ದಾರೆ ವಿದ್ಯಾರ್ಥಿಗಳು.

ಕಾಲೇಜು ಗೇಟಿಗೆ ಕರ್ಪೂರದಿಂದ ಪೂಜೆ ಮಾಡಿ ಈಡುಗಾಯಿ ಒಡೆದಿದ್ದಾರೆ ವಿದ್ಯಾರ್ಥಿಗಳು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೈನ್ ಮ್ಯಾನ್ ಮೇಲೆ ಪೋಸ್ಟ್ ಮ್ಯಾನ್ ಹಲ್ಲೆ ನಡೆಸಿದ್ಯಾಕೆ? ಶಾಕಿಂಗ್