Select Your Language

Notifications

webdunia
webdunia
webdunia
webdunia

ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್‌ ನ್ನು ಹೊರತಗೆಯುವ ವಿಧಾನ ಕಂಡುಹಿಡಿದ ವಿಜ್ಞಾನಿಗಳು

ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್‌ ನ್ನು ಹೊರತಗೆಯುವ ವಿಧಾನ ಕಂಡುಹಿಡಿದ ವಿಜ್ಞಾನಿಗಳು
ವಾಷಿಂಗ್ಟನ್ , ಭಾನುವಾರ, 2 ಜೂನ್ 2019 (06:54 IST)
ವಾಷಿಂಗ್ಟನ್ : ಜಗತ್ತಿನಲ್ಲಿ  ಏರುತ್ತಿರುವ ಜನಸಂಖ್ಯೆ, ವಾಹನಗಳ ಹಾವಳಿಯಿಂದ ವಾತಾವರಣದಲ್ಲಿ ಆಮ್ಲಜನಕಕ್ಕಿಂತ ಇಂಗಾಲದ ಡೈ ಆಕ್ಸೈಡ್‌ ಹೆಚ್ಚಾಗಿದ್ದು,  ಇದರಿಂದ ಮನುಷ್ಯರು ಇಂಗಾಲದ ಡೈ ಆಕ್ಸೈಡ್‌ ನ್ನು ಉಸಿರಾಡಿ ಆರೋಗ್ಯ ಹಾಳಾಗುತ್ತದೆ ಎಂಬ  ಭಯ ಹಲವರನ್ನು ಕಾಡುತ್ತಿತ್ತು. ಆದರೆ ಇದೀಗ ವಿಜ್ಞಾನಿಗಳು ಗಾಳಿಯಲ್ಲಿರುವ ವಿಷಾನಿಲ ಇಂಗಾಲದ ಡೈಆಕ್ಸೈಡ್‌ ಅನ್ನು ಹೊರತೆಗೆಯುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದರ ಮೂಲಕ ಸಿಹಿಸುದ್ದಿ ನೀಡಿದ್ದಾರೆ. 




ಟೊರೆಂಟೋ ಇಂಜಿನಿಯರಿಂಗ್‌ ಯೂನಿವರ್ಸಿಟಿಯ ತಂಡವೊಂದು ಸಂಶೋಧನೆ ನಡೆಸಿದ್ದು, ಕಾರ್ಬನ್‌ ಡೈಆಕ್ಸೈಡ್‌ ಅನ್ನು ಹವಮಾನದಿಂದ ಪ್ರತ್ಯೇಕಿಸಿ ಜೆಟ್‌ ಫ್ಯೂಲ್‌ ಅಥವಾ ಪ್ಲಾಸ್ಟಿಕ್‌ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಇಲೆಕ್ಟ್ರೋಮೆಕಾನಿಕಲ್‌ ದಾರಿಯನ್ನು ಕಂಡು ಹಿಡಿದಿದ್ದಾರೆ.


ಗಾಳಿಯಿಂದ ಇಂಗಾಲದ ಡೈಆಕ್ಸೈಡ್‌ ಅನ್ನು ಪ್ರತ್ಯೇಕಿಸಲು ಅಲ್ಕಲಿನ್‌ ಲಿಕ್ವಿಡ್‌ ಸೊಲ್ಯೂಷನ್‌ ಮೂಲಕ ಸಾಧ್ಯವಿದೆ. ಈ ದ್ರವದಲ್ಲಿ ಸಿಒ2 ಕರಗುತ್ತದೆ. ನಂತರ ಕಾರ್ಬೊನೆಟ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಮತ್ತೆ ಅನಿಲವನ್ನಾಗಿಯೂ ಪರಿವರ್ತಿಸಬಹುದಾಗಿದೆ. ಆದರೆ ಇದಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಕಾಂಗ್ರೆಸ್ ಸೇರ್ಪಡೆ ?