Select Your Language

Notifications

webdunia
webdunia
webdunia
webdunia

ಪೆಟ್ರೋಲ್, ಡೀಸೆಲ್‍ ಮಾತ್ರವಲ್ಲ ನೀರಿನಿಂದಲೂ ವಾಹನವನ್ನ ಓಡಿಸಬಹುದಂತೆ

ಪೆಟ್ರೋಲ್, ಡೀಸೆಲ್‍ ಮಾತ್ರವಲ್ಲ ನೀರಿನಿಂದಲೂ ವಾಹನವನ್ನ ಓಡಿಸಬಹುದಂತೆ
ಬೆಂಗಳೂರು , ಭಾನುವಾರ, 12 ಮೇ 2019 (07:03 IST)
ಬೆಂಗಳೂರು : ಪೆಟ್ರೋಲ್, ಡೀಸೆಲ್‍ ಬೆಲೆ ಹೆಚ್ಚಳದಿಂದ ತತ್ತರಿಸಿಹೋದ ಜನರಿಗೆ ಮೆಕ್ಯಾನಿಕಲ್‍ ಎಂಜಿನಿಯರ್ ಒಬ್ಬರು ಸಿಹಿಸುದ್ದಿ ನೀಡಿದ್ದಾರೆ.




ಕೊಯಮತ್ತೂರು ಮೂಲದ ಮೆಕ್ಯಾನಿಕಲ್‍ ಎಂಜಿನಿಯರ್ ಸೌಂದರ್ಯ ರಾಜನ್‍ ಎಂಬ ವ್ಯಕ್ತಿ ನೀರಿನಿಂದ ವಾಹನದ ಎಂಜಿನನ್ನು ಚಾಲನೆ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ. ವಾಹನದಲ್ಲಿ ಅಳವಡಿಸಿರುವ ಡಿಸ್ಟಿಲ್ಡ್ ವಾಟರ್ ನ್ನು ಪೆಟ್ರೋಲ್‍ ಮತ್ತು ಡೀಸೆಲ್‍ ಗೆ ಬದಲಾಗಿ ವಾಹನದ ಎಂಜಿನ್‍ ಗೆ ಬಳಸಬಹುದು ಅಂತಾ ಅವರು ಪ್ರಾತ್ಯಕ್ಷಿಕೆಯಲ್ಲಿ ತೋರಿಸಿದ್ದಾರೆ. ಹೈಡ್ರೋಜನ್‍ ಅನ್ನು ಇಂಧನವಾಗಿ ಬಳಸಿದ್ರೆ, ಅದು ಆಮ್ಲಜನಕವಾಗಿ ಪರಿವರ್ತನೆಯಾಗುತ್ತೆ. ಇದು ಎಂಜಿನ್ ಚಾಲನೆಗೆ ಸಹಾಯಕವಾಗಲಿದೆ ಅಂತಾ ಹೇಳಿದ್ದಾರೆ.


ಆದರೆ ಈ ಸಂಶೋಧನೆಯನ್ನು ಜಾರಿಗೆ ತರುತ್ತಿರುವುದು ಜಪಾನ್.  ಹೌದು. ಈ ಬಗ್ಗೆ 10 ವರ್ಷಗಳ ಕಾಲ ಸಂಶೋಧನೆ ನಡೆಸಿ ಯಶಸ್ವಿಯಾದ ಸೌಂದರ್ಯ ರಾಜನ್‍ ಇದರ ಬಗ್ಗೆ ಭಾರತದ ಹಲವು ವ್ಯಕ್ತಿಗಳಲ್ಲಿ ಹೋಗಿ ವಿವರಿಸಿದರೂ ಯಾವುದೇ ಪ್ರತಿಕ್ರಿಯೆ ದೊರಕದ ಹಿನ್ನಲೆಯಲ್ಲಿ ಜಪಾನ್ ಸರ್ಕಾರದ ಬಳಿ ನನ್ನ ಸಂಶೋಧನೆ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಜಪಾನ್‍ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಚುನಾವಣೆ ಹಿನ್ನಲೆ; ಇಂದು 7 ರಾಜ್ಯಗಳ 59 ಕ್ಷೇತ್ರಗಳಲ್ಲಿ 6ನೇ ಹಂತ ಮತದಾನ