ಬಿಜೆಪಿ ಮುಖಂಡನ ಮೇಲೆ ಪತ್ರಕರ್ತೆಯಿಂದ ಅತ್ಯಾಚಾರದ ಆರೋಪ

ಶನಿವಾರ, 3 ನವೆಂಬರ್ 2018 (15:15 IST)
ನವದೆಹಲಿ : ಬಿಜೆಪಿ ಮುಖಂಡರೊಬ್ಬರ ಮೇಲೆ ಪತ್ರಕರ್ತೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ.

ಭಾರತೀಯ ಮೂಲದ ಅಮೇರಿಕ ಪತ್ರಕರ್ತೆ ಪಲ್ಲವಿ ಗಗೋಯ್  ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಗುರುವಾರ ವಾಷಿಂಗ್ಟನ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

 

ಪತ್ರಕರ್ತೆ ಪಲ್ಲವಿ ಗಗೋಯ್ ಅವರು 23 ವರ್ಷಗಳ ಹಿಂದೆ ಏಷ್ಯನ್ ಏಜ್ ಪತ್ರಿಕೆಯ ಒಪ್-ಎಡ್ ಪುಟದ ಸಂಪಾದಕಿಯಾಗಿದ್ದಾಗ ಎಂಜೆ ಅಕ್ಬರ್ 2 ಬಾರೀ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಈ ಎರಡು ಘಟನೆಯ ಬಳಿಕ, ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದರೂ ಕೂಡ ಜೈಪುರದಲ್ಲಿ ಇದ್ದಾಗ ಅಕ್ಬರ್ ತನಗೆ ಫೋನ್ ಮಾಡಿ ತಾವಿರುವಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪಲ್ಲವಿ ಗಗೋಯ್ ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿದ್ಯಾರ್ಥಿನಿಗೆ ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಮುದುಕ