Select Your Language

Notifications

webdunia
webdunia
webdunia
Sunday, 13 April 2025
webdunia

ಪಕ್ಕದ್ಮನೆ ಪರಿಮಳಾ ತಡರಾತ್ರಿ ಬಾ ಅಂತಾಳೆ… ಏನ್ಮಾಡಲಿ?

ಆಂಟಿ
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2019 (14:19 IST)
ಪ್ರಶ್ನೆ: ನಾನು 26 ವರ್ಷದ ಯುವಕ. ನೋಡಲು ಕಟ್ಟುಮಸ್ತಾಗಿದ್ದೇನೆ. ನನ್ನ ಮನೆಯ ಪಕ್ಕದಲ್ಲಿ ಪರಿಮಳಾ ಆಂಟಿ ಇದ್ದಾರೆ. ಅವರ ವಯಸ್ಸು 30. ಅವರ ಗಂಡ  ಬೆಳಗ್ಗೆ ಮನೆ ಬಿಟ್ಟು ಬೇರೆ ಊರಿಗೆ ನಿತ್ಯ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಾರೆ. ಪರಿಮಳಾಗೆ ಇಬ್ಬರು ಮಕ್ಕಳಿದ್ದಾರೆ. ಅವರು ಶಾಲೆಗೆ ಹೋಗುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವಾಗ ಪರಿಮಳಾ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ಸುಖ ನೀಡು ಅಂತ ಒತ್ತಾಯ ಮಾಡುತ್ತಿದ್ದಾರೆ.

ನೋಡೋಕೂ ತುಂಬಾನೆ ಸುಂದರವಾಗಿದ್ದಾರೆ. ಹೀಗಾಗಿ ನಾನೂ ಕೂಡಾ ಹಲವು ಬಾರಿ ಆಂಟಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿರುವೆ. ಆದರೆ ನನ್ನು ಸಮಸ್ಯೆ ಏನೆಂದರೆ, ಈಗ ನನಗೆ ಮದುವೆ ನಿಶ್ಚಯವಾಗಿದೆ. ಆದರೂ ಆಂಟಿ ಮನೆಗೆ ಬಾ ಅಂತಾ ಪದೇ ಪದೇ ಕರೆಯುತ್ತಿದ್ದಾರೆ. ಆಂಟಿಯನ್ನು ಬಿಡಲು ಮನಸ್ಸು ಒಪ್ಪುತ್ತಿಲ್ಲ. ಹಾಗೇನೇ ನಮ್ಮ ಮದುವೆಗೂ ಯಾವುದೇ ಸಮಸ್ಯೆ ಬರಬಾರದು. ಪರಿಹಾರ ತಿಳಿಸಿ.
ಉತ್ತರ: ಮದುವೆಗೂ ಮುನ್ನ ನೀವು ಆಂಟಿಯ ಮೋಹದ ಬಲೆಯಲ್ಲಿ ಸಿಲುಕಿದ್ದು ತಪ್ಪು. ಆಂಟಿಗೆ ಗಂಡ, ಮಕ್ಕಳು ಇದ್ದಾರೆ.

ಸಂಸಾರವಿದೆ ಎನ್ನುವ ಅರಿವಿರಲಿ. ಅವರ ಒಂಟಿತನ ನೀಗಿಸಿಕೊಳ್ಳೋಕೆ ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು. ನಿಮ್ಮ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ. ನಂಬರ್ ಬದಲಿಸಿ. ಇಲ್ಲವೇ ನೇರವಾಗಿ ಅವರಿಗೆ ಹೇಳಿಬಿಡಿ. ಇನ್ನು ನೀವು ಮದುವೆಯ ಹೊಸ್ತಿನಲ್ಲಿದ್ದೀರಿ. ಹೊಸ ಸಂಸಾರ, ಸಂಗಾತಿ ಬಗ್ಗೆ ನೂರಾರು ಕನಸುಗಳು ನಿಮಗಿರುತ್ತವೆ.

ನಿಮ್ಮಾಕೆಯೂ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿರುತ್ತಾರೆ. ಅವರಿಗೆ ಮೋಸ ಮಾಡಬೇಡಿ. ಆದದ್ದೆಲ್ಲ ಕೆಟ್ಟ ಕನಸು ಅಂತ ತಿಳಿದುಕೊಂಡು, ನಿಮ್ಮ ಹೊಸ ಬಾಳು ರೂಪಿಸಿಕೊಳ್ಳುವತ್ತ ಗಮನ ಕೊಡಿ. ಇದರಿಂದ ಅವರ ಸಂಸಾರ ಹಾಗೂ ನಿಮ್ಮ ಸಂಸಾರ ಸರಿಯಾಗಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೊಣ್ಣೆ ಹಿಡ್ಕಂಡು ನಿಂತ್ಕಳಿ ಎಂದ ಮಾಜಿ ಶಾಸಕ…