Publish Date: Wed, 13 Mar 2019 (12:19 IST)
Updated Date: Wed, 13 Mar 2019 (17:32 IST)
ಬೆಂಗಳೂರು: ಸುಮಧುರ ಲೈಂಗಿಕ ಸುಮಧುರ ದಾಂಪತ್ಯದ ಪ್ರಮುಖ ಸೇತುವೆ. ಆದರೆ ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ದಂಪತಿ ನಡುವಿನ ಲೈಂಗಿಕ ಸುಖಕ್ಕೆ ಬ್ರೇಕ್ ಹಾಕುವುದು ಈ ಎರಡು ವಿಚಾರಗಳು. ಅವು ಯಾವುವು ನೋಡೋಣ.
ಮನೆ ತುಂಬಾ ಜನ
ಇತ್ತೀಚೆಗಿನ ದಿನಗಳಲ್ಲಿ ಕೂಡು ಕುಟುಂಬ ತೀರಾ ಕಡಿಮೆ. ಹಾಗಿದ್ದರೂ ಮದುವೆಯಾದ ಹೊಸತರಲ್ಲಿ ಸೊಸೆ ಅಥವಾ ಮಗಳು ಮನೆ ಕೆಲಸಕ್ಕೆ ಅಡ್ಜಸ್ಟ್ ಆಗಲಿ ಎಂದು ಜತೆಗೆ ಹಿರಿಯರು ಕೆಲವು ದಿನಗಳ ಮಟ್ಟಿಗೆ ಜತೆಗಿರುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕ ಮನೆಯಾಗಿದ್ದರೆ ನೂತನ ದಂಪತಿಗೆ ಮನಸ್ಸು ಬಿಚ್ಚಿ ನಡೆದುಕೊಳ್ಳಲು ಕಷ್ಟವಾಗುತ್ತದೆ. ಹಿರಿಯರ ಎದುರು ರೊಮ್ಯಾಂಟಿಕ್ ಆಗಿರಲು ಒಂದು ರೀತಿಯ ಸಂಕೋಚ.
ಗರ್ಭಿಣಿಯಾದರೆ ಎಂಬ ಭಯ
ಮದುವೆಯಾದ ತಕ್ಷಣವೇ ಮಕ್ಕಳ ಮಾಡಿಕೊಳ್ಳುವುದು ಯಾರಿಗೂ ಇಷ್ಟವಿರುವುದಿಲ್ಲ. ಹಾಗಾಗಿ ಕುಟುಂಬ ನಿಯಂತ್ರಣ ವಿಚಾರದಲ್ಲಿ ಕಾಡುವ ಸಂಶಯಗಳು, ಗರ್ಭಿಣಿಯಾದರೆ ಎಂಬ ಭಯದಲ್ಲೇ ಸಹಜ ಸೆಕ್ಸ್ ನಡೆಸಲು ಆತಂಕ ಕಾಡುವುದು ಸಾಮಾನ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.