Select Your Language

Notifications

webdunia
webdunia
webdunia
webdunia

ಮಾಜಿ ಗೆಳೆಯನ ನೆನಪು ಕಾಡುತ್ತಿದೆ ಏನು ಮಾಡಲಿ?

ಮಾಜಿ ಗೆಳೆಯನ ನೆನಪು ಕಾಡುತ್ತಿದೆ  ಏನು ಮಾಡಲಿ?
ಬೆಂಗಳೂರು , ಬುಧವಾರ, 13 ಮಾರ್ಚ್ 2019 (12:16 IST)
ಬೆಂಗಳೂರು : ಪ್ರಶ್ನೆ : ಹಾಯ್. ನಾನು 28ವರ್ಷ ವಯಸ್ಸಿನವಳಾಗಿದ್ದು, ನನಗೆ 3 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆ. ಇದು ಆ್ಯರೆಂಜ್ ಮ್ಯಾರೇಜ್. ನಾನು ಮದುವೆಯಾಗುವ ಹುಡುಗ ವಿದ್ಯಾವಂತನಾಗಿದ್ದು, ಉದಾರ ಮನೋಭಾವದವನಾಗಿದ್ದಾನೆ. ಆದರೆ ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ  ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆ. ಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು ಆಗುತ್ತಿಲ್ಲ. ದಯವಿಟ್ಟು ನನಗೆ ಪರಿಹಾರ ತಿಳಿಸಿ.

ಉತ್ತರ : ನಿಮಗೆ ನಿಮ್ಮ ಮಾಜಿ ಗೆಳೆಯನ ನೆನಪು ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಹಾಗೇ ನೀವು ಮದುವೆಯಾಗಲು ಇದು ಸರಿಯಾದ ಸಮಯವಲ್ಲ. ಆದ್ದರಿಂದ ನಿಮ್ಮ ಮದುವೆಯನ್ನು ಮುಂದೂಡುವುದು ಅಥವಾ ರದ್ದು ಮಾಡುವುದು ಉತ್ತಮ.

 

ಹಾಗೇ ನಾನು ಮೊದಲನೇಯದಾಗಿ ನಿಮಗೆ ತಿಳಿಸುವುದೆನೆಂದರೆ ನೀವು ಬಾಯ್ ಫ್ರೆಂಡ್ ಜೊತೆ ಇದ್ದದ್ದು ನಿಮ್ಮ ಭೂತಕಾಲದ ಸಮಯದಲ್ಲಿ  ಅದನ್ನು ನೀವು ಬದಲಿಸಲು ಸಾಧ್ಯವಿಲ್ಲ. ಎರಡನೇಯದಾಗಿ ಈಗ ನಿಮಗೆ ಮದುವೆ ನಿಶ್ಚಿಯವಾದ್ದರಿಂದ  ನೀವು ಅದರ ಬಗ್ಗೆ ಗಮನಹರಿಸುವುದು ಉತ್ತಮ. ಕೊನೆಯದಾಗಿ ನಿಮ್ಮ ಭವಿಷ್ಯ ಏನೆಂದು ನಿಮಗೆ ತಿಳಿಯದ ಕಾರಣ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಂಡಿನೋವು ಸಮಸ್ಯೆಗೆ ಈ ಹಣ್ಣಿನ ಬೀಜದಲ್ಲಿದೆ ಪರಿಹಾರ