Select Your Language

Notifications

webdunia
webdunia
webdunia
webdunia

ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ನೀಡಿದ ಜಾಧವ್

ಖರ್ಗೆ
ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಪುತ್ರ ವ್ಯಾಮೋಹ ವಿಪರೀತವಾಗಿದೆ. ಪುತ್ರನನ್ನು ಸಚಿವನನ್ನಾಗಿ ಮಾಡಲು ನನ್ನಂತೆ ಹಲವರನ್ನು ತುಳಿದಿದ್ದಾರೆ ಎಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ವ್ಯಾಮೋಹದಿಂದಾಗಿ ನಾನು ಪಕ್ಷ ತ್ಯಜಿಸುವಂತಾಯಿತು ಎಂದಿದ್ದಾರೆ. ಹಲವರನ್ನು ಪಕ್ಷದಲ್ಲಿ ತುಳಿಯಲಾಗಿದೆ. ಅದರಲ್ಲಿ ನಾನೂ ಒಬ್ಬ  ಎಂದು ಹೇಳಿದರು.

ಇನ್ನು  ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ ಉಮೇಶ್ ಜಾಧವ್, ಸಿದ್ದರಾಮಯ್ಯನವರಿಗೆ ಪುತ್ರ ವ್ಯಾಮೋಹವಿದ್ದರೆ ತಮ್ಮ ಮಗನನ್ನು ಸಚಿವರಾನ್ನಾಗಿ ಮಾಡುತ್ತಿದ್ದರು. ಆದರೆ ಅವರು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

420 ಹೋಮಿಯೋಪತಿ ಔಷಧಿಕಾರರು ಹುದ್ದೆಗಾಗಿ ಅರ್ಜಿ ಆಹ್ವಾನ