Select Your Language

Notifications

webdunia
webdunia
webdunia
webdunia

ಕೇಂದ್ರಿಯ ವಿಶ್ವವಿದ್ಯಾಲಯದ ಹೊಸ ಆವಿಷ್ಕಾರ ಏನು ಗೊತ್ತಾ?

ಕೇಂದ್ರಿಯ ವಿಶ್ವವಿದ್ಯಾಲಯದ  ಹೊಸ ಆವಿಷ್ಕಾರ  ಏನು ಗೊತ್ತಾ?
ಕಲಬುರಗಿ , ಮಂಗಳವಾರ, 20 ನವೆಂಬರ್ 2018 (14:43 IST)
ವಿಶ್ವವಿದ್ಯಾಲಯ ಎಂದರೆ ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನೆ ಕೇಂದ್ರಗಳು ಎಂದೇ ಖ್ಯಾತವಾಗಿದೆ. ಆದರೆ ಅವು ಈಗ ವಿದ್ಯುತ್ ಉತ್ಪಾದನೆಯ ಕೇಂದ್ರಗಳಾಗುತ್ತಿವೆ ಎಂದರೆ ನಂಬುತ್ತೀರಾ?

 ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿನ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಕೆ ಮಾಡಿದೆ. ಇದರಿಂದ ವರ್ಷಕ್ಕೆ ಸುಮಾರು 14-18 ಲಕ್ಷ ಉಳಿತಾಯವಾಗುತ್ತಿದೆ ಎಂದು ಸಿಯುಕೆ ತಿಳಿಸಿದೆ.
ವಿದ್ಯುತ್ ಬಿಲ್​ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿನ 651 ಎಕರೆ ಭೂಮಿಯಲ್ಲಿ ವಿದ್ಯುತ್​ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ಉಳಿದ ಹಣವನ್ನು ಶೈಕ್ಷಣಿಕ ಚಟುವಟಿಕೆಗೆ ಬಳಸುದರ ಜೊತೆಗೆ ಹಾಸ್ಟೆಲ್​ ಗಳಿಗೂ ಬಳಕೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮಾಡಿದೆ.  

ವಿದ್ಯುತ್ ಉತ್ಪಾದನೆಗಾಗಿ ವಿಶ್ವವಿದ್ಯಾಲಯದ ಮೇಲ್ಛಾವಣಿಯನ್ನು ಘಟಕಕ್ಕೆ ಬಳಸಲಾಗುತ್ತಿದೆ. 240 ವಾಟ್​ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. ಸಿಯುಕೆ ಆವರಣಕ್ಕೆ 2 ಸಾವಿರ ಕಿಲೋ ವಾಟ್ ವಿದ್ಯುತ್ ಅಗತ್ಯವಿದ್ದು, ಈಗ ಎರಡು ಸೌರ ವಿದ್ಯುತ್ ಘಟಕಗಳ ಅವಳಡಿಕೆಯಿಂದ 750 ಕಿಲೋ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಎಂಜಿನಿಯರ್​ ಐ.ಪಿ ಮಹಾಗಾಂವಕರ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆಯಂತೆ ಈ ಟಾಯ್ಲೆಟ್ ಬ್ರಷ್