Select Your Language

Notifications

webdunia
webdunia
webdunia
webdunia

ಅಂಬಿ ಮಗ ಅಭಿಷೇಕ್ ನ ‘ಅಮರ್’ ಚಿತ್ರಕ್ಕೆ ಶುಭ ಹಾರೈಸಿದ ನಟ ದರ್ಶನ್

ಅಂಬಿ ಮಗ  ಅಭಿಷೇಕ್ ನ ‘ಅಮರ್’ ಚಿತ್ರಕ್ಕೆ ಶುಭ ಹಾರೈಸಿದ ನಟ ದರ್ಶನ್
ಬೆಂಗಳೂರು , ಮಂಗಳವಾರ, 29 ಮೇ 2018 (16:54 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅವರು ‘ಅಮರ್’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ಪಡೆಯುತ್ತಿದ್ದು, ಇದೀಗ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟರ್ ಮೂಲಕ  ಶುಭಕೋರಿದ್ದಾರೆ.


ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಶುರುವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದಲ್ಲಿರುವ ಶ್ರೀ ತಿರುಮಲ ಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಕುರಿತು ಟ್ವೀಟ್ ಮಾಡಿರುವ ನಟ ದರ್ಶನ್ ಅವರು,’ ನಮ್ಮೆಲ್ಲರ ಪ್ರೀತಿಯ ಅಂಬಿ ಅಪ್ಪಾಜಿ ರವರ ಪುತ್ರ ಅಭಿ ಇಂದು 'ಅಮರ್’ ಚಿತ್ರದ ಮುಹೂರ್ತದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಈ ಹುಡುಗನ ಮೇಲಿರಲಿ. ಚಿತ್ರವು ಭರ್ಜರಿ ಯಶಸ್ಸು ಗಳಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ’ ಎಂದು ಶುಭಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಊರಿನಲ್ಲೊಂದು ಒಳ್ಳೆ ಕೆಲಸ ಮಾಡಿದ ಒಳ್ಳೆ ಹುಡುಗ ಪ್ರಥಮ್