ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೊತ್ಸವ: ಐದು ಜನರಿಗೆ ಗೌರವ ಡಾಕ್ಟರೇಟ ಪ್ರದಾನ

ಬುಧವಾರ, 11 ಜುಲೈ 2018 (18:12 IST)
ಕಲಬುರಗಿ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ    ಜುಲೈ 13ರಂದು ಮೂರನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ 5 ಜನ ಗಣ್ಯರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಮ್.ಮಹೇಶ್ವರಯ್ಯ ತಿಳಿಸಿದರು. 
 
ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೊಷ್ಟಿಯನ್ನುದ್ದೇಶಿಸಿ ಮಾತನಾಡಿ,  ಘಟಿಕೋತ್ಸವದಲ್ಲಿ ಖ್ಯಾತ ಕಲಾವಿದ ಡಾ: ಜಗದೇವಪ್ಪಾ ಶಂಕ್ರೆಪ್ಪಾ ಖಂಡೇರಾವ್, ಖ್ಯಾತ ಕನ್ನಡದ ಸಂಶೋಧಕ ಡಾ: ಎಮ್. ಚಿದಾನಂದ ಮೂರ್ತಿ, ದಲಿತ ಸಂವೇದನೆಯ ಕವಿ ಹಾಗೂ  ನಾಟಕಕಾರ ಡಾ: ಸಿದ್ಧಲಿಂಗಯ್ಯ, ಭಾರತದ ಕ್ಷೀಪಣಿ ಮಹಿಳೆಯೆಂದೆ ಖ್ಯಾತಿವೆತ್ತ ವಿಜ್ಞಾನಿ ಟೇಸ್ಸಿ ಥಾಮಸ್ ಮತ್ತು ಗುರುತ್ವಾಕರ್ಷಣಾ ಕುರಿತು ಅಗಾಧ ಸಂಶೋಧನೆ ಮಾಡಿರುವ ವಿಜ್ಞಾನಿ  ಡಾ: ಬಾಲಸುಬ್ರಮಣಿಯನ್ ಆರ್ ಅಯ್ಯರ್. ಅವರಿಗೆ  ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು.  
 
ಘಟಿಕೋತ್ಸವದಲ್ಲಿ ಒಟ್ಟು 910 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ  43 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ ಹಾಗೂ 24 ವಿಧ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯುವರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುದ್ದೆ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೃಹಸಚಿವರ ಮನೆ ಮುಂದೆಯೇ ದರೋಡೆ!