Publish Date: Fri, 21 Sep 2018 (07:14 IST)
Updated Date: Fri, 21 Sep 2018 (07:17 IST)
ಬೆಂಗಳೂರು : ಪ್ರಜ್ವಲ್ ದೇವರಾಜ್ ಅಭಿನಯದ ‘ಮೆರವಣಿಗೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಮೋಡಿ ಮಾಡಿದ ನಟಿ ಐಂದ್ರಿತಾ ರೇ ಇದೀಗ ಬಾಲಿವುಡ್ ನಲ್ಲಿ ನಟಿಸಲಿದ್ದಾರೆ.
ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು 'ಶಾಂದರ್' ಖ್ಯಾತಿಯ ವಿಕಾಸ್ ಶರ್ಮಾ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ 'ಕಮಿಂಗ್ ಬ್ಯಾಕ್' ಎಂಬ ಹೆಸರನ್ನು ಇಡಬಹುದು ಎನ್ನಲಾಗುತ್ತಿದೆ. ಇದರಲ್ಲಿ ನಾಯಕ ಅರ್ಬಾಜ್ ಖಾನ್ ಗೆ ಜೋಡಿಯಾಗಿ ನಟಿ ಐಂದ್ರಿತಾ ನಟಿಸಲಿದ್ದಾರೆ.
ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ಚಿತ್ರೀಕರಣವು ಸ್ವಿಜರ್ಲಾಂಡ್ ನಲ್ಲಿ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.