ಬೆಂಗಳೂರು : ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವ ಇದೀಗ ಸಿಎಂ ಕುಮಾರಸ್ವಾಮಿಯವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ತನ್ನ ಕೈಯಲ್ಲಿ ಇದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಮ್ಮ ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಅಪ್ಪ-ಮಕ್ಕಳು ಲೂಟಿ ಕೋರರು ಅಂತಾ ಹೇಳಿಕೆ ನೀಡಿದ್ದಾರೆ. ಯಾರು ಲೂಟಿ ಕೋರರು ಎಂಬುದನ್ನು ಮೊದಲು ತೋರಿಸಬೇಕು. ಈ ಹಿಂದೆಯೂ ಸಹ ನಮ್ಮನ್ನ ಜೈಲಿಗೆ ಕಳಿಸುತ್ತೀನಿ ಎಂದು ಅವರೇ ಜೈಲಿಗೆ ಹೋಗಿದ್ದರು. ಇಂದು ಡಿ.ಕೆ ಶಿವಕುಮಾರ್‍ರನ್ನು ಜೈಲಿಗೆ ಕಳುಹಿಸುತ್ತೀವಿ ಅಂತಾ ಹೇಳಿಕೆ ನೀಡುತ್ತಾರೆ’ ಎಂದು ಬಿಎಸ್‍ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ‘ಯಡಿಯೂರಪ್ಪ ರಾಜಕೀಯದಲ್ಲಾಗಲಿ, ವಯಸ್ಸಿನಲ್ಲಾಗಲಿ ನಮಗಿಂತ ಹಿರಿಯರಾಗಿದ್ದಾರೆ. ಅವರು ಪದ ಬಳಕೆ ಮಾಡುವಾಗ ಸ್ವಲ್ಪ ಹಿಡಿತದಲ್ಲಿಟ್ಟುಕೊಳ್ಳಬೇಕು. ಪರ್ಸೆಂಟೇಜ್ ಸರ್ಕಾರವನ್ನು ತಂದವರೇ ನೀವು, ಪರ್ಸೆಂಟೇಜ್ ಪಿತಾಮಹ ಯಡಿಯೂರಪ್ಪನವರು. ಹೀಗೆ ನೀವು ನಿಮ್ಮ ಮಾತನ್ನು ಮುಂದುವರಿಸಿದರೆ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಕಲ್ಲುಹೊಡೆಯುವುದನ್ನು ಮೊದಲು ನಿಲ್ಲಿಸಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.