Publish Date: Thu, 20 Sep 2018 (09:11 IST)
Updated Date: Thu, 20 Sep 2018 (09:12 IST)
ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ನ ಬಂಡಾಯದ ಲಾಭ ಪಡೆಯಲು ಯತ್ನಿಸಿ ಕೈಸುಟ್ಟುಕೊಂಡ ರಾಜ್ಯ ಬಿಜೆಪಿ ನಾಯಕರು ತಮ್ಮ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸರ್ಕಾರ ಉರುಳಿಸುವ ಪ್ರಯತ್ನ ಮಾಡಬೇಡಿ ಎಂದು ಸೂಚಿಸಿದರೂ ತೆರೆಮರೆಯಲ್ಲೇ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡ ರಾಜ್ಯ ನಾಯಕರ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಎನ್ನಲಾಗಿದೆ.
ಆಪರೇಷನ್ ಕಮಲ ಮಾಡಿ, ಸರ್ಕಾರ ಉರುಳಿಸಿ ಪಕ್ಷಕ್ಕೆ ಮುಜುಗರ, ಕೆಟ್ಟ ಹೆಸರು ತಂದುಕೊಂಡು ಇಮೇಜ್ ಕಳೆದುಕೊಳ್ಳಬೇಡಿ. ಈ ರೀತಿ ಮಾಡಿ ಲೋಕಸಭೆ ಚುನಾವಣೆಗೆ ಸಂಕಷ್ಟ ಎಳೆದುಕೊಳ್ಳಬೇಡಿ. ಸರ್ಕಾರ ಉರುಳಿಸುವ ಪ್ರಯತ್ನ ಮಾಡುವುದು ಬಿಟ್ಟು ಚುನಾವಣೆಯ ತಯಾರಿ ಮಾಡುವುದರತ್ತ ಗಮನ ಹರಿಸಿ ಎಂದು ಶಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.