Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಬಗ್ಗೆ ಟೀಕಿಸಲು ಹೋಗಿ ಯಡವಟ್ಟು ಮಾಡಿಕೊಂಡ ರಮ್ಯಾ ಬಳಿಕ ಕ್ಷಮೆ ಯಾಚನೆ

ಪ್ರಧಾನಿ ಮೋದಿ ಬಗ್ಗೆ ಟೀಕಿಸಲು ಹೋಗಿ ಯಡವಟ್ಟು ಮಾಡಿಕೊಂಡ ರಮ್ಯಾ ಬಳಿಕ ಕ್ಷಮೆ ಯಾಚನೆ
ನವದೆಹಲಿ , ಬುಧವಾರ, 19 ಸೆಪ್ಟಂಬರ್ 2018 (10:14 IST)
ನವದೆಹಲಿ: ಪ್ರಧಾನಿ ಮೋದಿ ಬಗ್ಗೆ ಆಗಾಗ ಟ್ವಿಟರ್ ನಲ್ಲಿ ಟಾಂಗ್ ಕೊಡುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಈಗ ಹಾಗೇ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.

ಪ್ರಧಾನಿ ಮೋದಿ ವಿದ್ಯಾರ್ಹತೆ ಬಗ್ಗೆ ಟೀಕಿಸಲು ವಿಡಿಯೋವೊಂದನ್ನು ಪ್ರಕಟಿಸಿದ್ದ ರಮ್ಯಾ ಟ್ವಿಟರಿಗರ ಕೈಯಲ್ಲಿ ಚೆನ್ನಾಗಿ ಮಂಗಳಾರತಿ ಮಾಡಿಸಿಕೊಂಡ ಮೇಲೆ ಕ್ಷಮೆ ಯಾಚಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿಯನ್ನುಆಗ ಪತ್ರಕರ್ತರಾಗಿದ್ದ, ಹಾಲಿ ಸಂಸದ ರಾಜೀವ್ ಶುಕ್ಲಾ ಸಂದರ್ಶನ ಮಾಡುವ ವಿಡಿಯೋವನ್ನು ರಮ್ಯಾ ಪ್ರಕಟಿಸಿದ್ದರು. ಈ ವಿಡಿಯೋದಲ್ಲಿ ನೋಡಿ ಮೋದಿ ಸಾಹೇಬರು ತಾವು ಹೈಸ್ಕೂಲ್ ಓದಿದ್ದು ಮಾತ್ರ ಎನ್ನುತ್ತಿದ್ದಾರೆ. ಆದರೆ ಈಗ ಅವರ ಕೈಯಲ್ಲಿ ಪದವಿ ಪ್ರಮಾಣ ಪತ್ರಗಳಿವೆ’ ಎಂದು ಲೇವಡಿ ಮಾಡಿದ್ದರು.

ಆದರೆ ಅಸಲಿಗೆ ಆ ವಿಡಿಯೋದಲ್ಲಿ ಮೋದಿ ಮೊದಲು ಹೈಸ್ಕೂಲ್ ಶಿಕ್ಷಣ ಮುಗಿಸಿ ಬಳಿಕ ಬಿಎ, ಎಂಎ ಪದವಿಗಳನ್ನು ದೂರಶಿಕ್ಷಣದ ಮೂಲಕ ಪಡೆದಿರುವುದಾಗಿ ಹೇಳಿದ್ದರು. ಇದನ್ನು ಸರಿಯಾಗಿ ಪರಾಮರ್ಶಿಸದೇ ಟೀಕೆ ಮಾಡಲು ಹೋದ ರಮ್ಯಾಗೆ ಟ್ವಿಟರಿಗರು ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ವಿವಾದವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ ರಮ್ಯಾ ವಿಡಿಯೋ ಡಿಲೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಡಿಕೆ ಶಿವಕುಮಾರ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ಸಚಿವರು