Publish Date: Tue, 18 Sep 2018 (20:14 IST)
Updated Date: Tue, 18 Sep 2018 (20:16 IST)
ರಾಜ್ಯದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರದಲ್ಲಿ ರಾಜಕೀಯ ದಿನಕ್ಕೊಂದು ರೂಪು ಪಡೆದುಕೊಳ್ಳುತ್ತಿದೆ.
ಪ್ರತಿದಿನವೂ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿರುವ ನಡೆಯಿಂದ ಪಾರಾಗಲು ಕೈ ನಾಯಕರು ಹೈಕಮಾಂಡ್ ಗೆ ಮೋರೆಹೋಗಿದ್ದಾರೆ.
ಕಾಂಗ್ರೆಸ್ ನಲ್ಲಿ ಭಿನ್ನಮತ ಹೊಗೆಯಾಡುತ್ತಿದೆ. ಆದರೂ ಪ್ರಮುಖರು ನಾಯಕರು ಸಮಾಲೋಚನೆ ನಡೆಸಿದರೂ ಶಾಸಕರ ಹಾಗೂ ಕೆಲವು ಸಚಿವರ ಅಸಮಧಾನಗಳು ಕೊನೆಯಾಗಿಲ್ಲ.
ಭಿನ್ನ ನಾಯಕರು ಸಭೆ ಮೇಲೆ ಸಭೆಗಳನ್ನು ನಡೆಸುತ್ತಿರುವುದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ತುಸು ಆತಂಕ ತಂದೊಡ್ಡಿದೆ. ಆದರೂ ಬಿಕ್ಕಟ್ಟು ಸಂಬಂಧ ಸಮಾಲೋಚನೆ ನಡೆಸಿ ಭರವಸೆ ನೀಡಿರುವುದು ಭಿನ್ನರಲ್ಲಿ ಕೊಂಚ ಆಶಾಭಾವನೆ ಮೂಡಿಸಿದೆ ಎನ್ನಲಾಗಿದೆ.