Publish Date: Tue, 18 Sep 2018 (20:06 IST)
Updated Date: Tue, 18 Sep 2018 (20:08 IST)
ತೈಲ ಬೆಲೆ ಮತ್ತೆ ಏರಿಕೆ ಕಂಡುಬಂದಿದ್ದು, ವಾಹನಗಳ ಸವಾರರನ್ನು ಕಂಗೆಡುವಂತೆ ಮಾಡಿದೆ.
ಪ್ರತಿನಿತ್ಯ ಏರು ಗತಿಯಲ್ಲಿ ತೈಲ ಬೆಲೆ ಸಾಗಿರುವುದು ವಾಹನಗಳ ಸವಾರರು ಹಾಗೂ ಸಾಮಾನ್ಯ ಜನರನ್ನು ಚಿಂತೆಗೆ ಈಡಾಗುವಂತೆ ಮಾಡಿದೆ. ಇಂಧನ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದು ಸವಾರರು ಪರಿತಪಿಸುವಂತಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬಲೆ ಲೀಟರ್ ಗೆ 82.16 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಬೆಲೆ 73.87 ರೂ.ಗಳಿಗೆ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ 89.54 ರೂ. ಮತ್ತು ಡೀಸೆಲ್ 78.42 ರೂ.ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿಯೂ ಪೆಟ್ರೋಲ್ 84.74 ರೂ. ಹಾಗೂ ಡೀಸೆಲ್ 76.16 ರೂ.ಗೆ ಏರಿಕೆ ಕಂಡಿದೆ.