Publish Date: Tue, 18 Sep 2018 (19:59 IST)
Updated Date: Tue, 18 Sep 2018 (20:00 IST)
ಜಗಳದಲ್ಲಿ ಕಾರಿಗೆ ಜಖಂಗೊಳಿಸಿದ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಜಗಳ ತೆಗೆದು ಕಾರಿನ ಮೇಲೆ ಜಖಂಗೊಳಿಸಿದ ತಮ್ಮನನ್ನು ಸ್ವಂತ ಅಣ್ಣನೇ ಹಾಲೋಬ್ಲಾಕ್ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ತಾವರಕೆರೆಯ ವನಗನಹಟ್ಟಿ ನಿವಾಸಿಯಾದ ಜಗದೀಶ್ ಕೊಲೆಯಾದವನು. ಇವನ ಸಹೋದರ ಮುನಿರಾಜು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಎಲೆಕ್ಟ್ರಿಕಲ್ ಗುತ್ತಿಗೆದಾರನಾಗಿದ್ದ ಮುನಿರಾಜು ಅಕ್ಕನ ಮನೆಯಲ್ಲಿದ್ದ. ಅದೇ ಮನೆಯಲ್ಲಿ ಸಹೋದರ ಜಗದೀಶ್ ಕೂಡ ಇದ್ದ. ಕುಡಿದು ಜಗಳ ತೆಗೆದ ವೇಳೆ ಈ ಕೊಲೆ ನಡೆದಿದೆ.
ಆರೋಪಿ ಮುನಿರಾಜುನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.