Publish Date: Wed, 19 Sep 2018 (20:18 IST)
Updated Date: Wed, 19 Sep 2018 (20:37 IST)
ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸೋದಕ್ಕೆ ಬಿಜೆಪಿ ಹೋಗಿಲ್ಲ. ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ತಿಳಿಸಿದ್ದಾರೆ.
ನಾವು ಯಾವ ಶಾಸಕರನ್ನೂ ಸಂಪರ್ಕ ಮಾಡ್ತಿಲ್ಲ ಅಂತಾ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಶ್ರೀರಾಮುಲು, ಅವರಲ್ಲಿ ವರ್ಗಾವಣೆ ದಂಧೆ, ರೊಕ್ಕದ ಕಾರಣಕ್ಕಾಗಿ ಅಸಮಾಧಾನ ಆಗಿರಬರಹುದು. ಅವರು ದೆಹಲಿಗಾದ್ರೂ ಹೋಗಲಿ, ಅವರು ಹಾಳಾಗಿಯಾದ್ರೂ ಹೋಗಲಿ. ನಮಗೇನು ಆಗಬೇಕ್ರಿ ಅಂತಾ ಕೆಂಡಾಮಂಡಲರಾದರು.