Publish Date: Thu, 20 Sep 2018 (07:17 IST)
Updated Date: Thu, 20 Sep 2018 (07:20 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಹರೀಶ್ ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಹೌದು. ನಟಿ ಮಾನ್ವಿತಾ ಹರೀಶ್ ಇದೀಗ ತಮ್ಮ ಹೆಸರನ್ನು 'ಮಾನ್ವಿತಾ ಕಾಮತ್' ಎಂದು ಬದಲಾಯಿಸಿಕೊಂಡಿದ್ದಾರೆ. ಇವರು ಸಡನ್ ಆಗಿ ಈ ರೀತಿ ತಮ್ಮ ಸರ್ ನೇಮ್ ಬದಲಾಯಿಸಿದ್ದಕ್ಕೆ ಅನೇಕರಲ್ಲಿ ಇವರು ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಆದರೆ ನಟಿ ಮಾನ್ವಿತಾ ತಮ್ಮ ಹೆಸರು ಬದಲಾಯಿಸಿದ್ದು ಮದುವೆಯಾಗಿ ಅಲ್ಲ ಬದಲಾಗಿ ಅವರ ತಂದೆಯ ಹೆಸರು ಹರೀಶ್ ಕಾಮತ್. ಇಷ್ಟು ದಿನ 'ಮಾನ್ವಿತಾ ಹರೀಶ್' ಎಂದು ಕರೆಯಿಸಿಕೊಳ್ಳುತ್ತಿದ್ದ ಈಕೆ ಇದೀಗ ತಮ್ಮ ಕುಟುಂಬದ ಸರ್ ನೇಮ್ 'ಕಾಮತ್' ಎಂಬುದನ್ನು ತಮ್ಮ ಹೆಸರಿನ ಕೊನೆಗೆ ಸೇರಿಸಿಕೊಂಡಿದ್ದಾರೆ ಅಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.