Publish Date: Wed, 19 Sep 2018 (06:49 IST)
Updated Date: Wed, 19 Sep 2018 (06:52 IST)
ಬೆಂಗಳೂರು : ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಯಶ್ – ರಾಧಿಕಾ ಇದೀಗ ಬೇಬಿ ಮೂನ್ ನಲ್ಲಿದ್ದಾರಂತೆ.
ಹೌದು. ಮದುವೆ ಆದ ನಂತರ ಹನಿಮೂನ್ ಗಾಗಿ ವಿದೇಶ ಸುತ್ತಿ ಬಂದಿದ್ದ ನಟ ಯಶ್ ಹಾಗೂ ನಟಿ ರಾಧಿಕಾ ಈಗ ತಮ್ಮ ಮನೆಗೆ ಮುದ್ದು ಕಂದನನ್ನು ಸ್ವಾತಿಸುವ ಸಂಭ್ರಮದಲ್ಲಿದ್ದಾರೆ. ಆದ ಕಾರಣ ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿ ಆಗಿದ್ದ ಯಶ್ ಇದೀಗ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು ತಮ್ಮ ಪತ್ನಿ ರಾಧಿಕಾ ಜೊತೆಯಲ್ಲಿ ಸಮುದ್ರ ತೀರದಲ್ಲಿ ಸುತ್ತಾಡಿಕೊಂಡು ಬಂದಿದ್ದಾರೆ.
ಈ ವಿಚಾರವನ್ನು ನಟಿ ರಾಧಿಕಾ ತಮ್ಮ ಇನ್‍ಸ್ಟಾಗ್ರಾಂ ನಲ್ಲಿ ಸದ್ಯ ನಾವು ಬೇಬಿ ಮೂನ್ ನಲ್ಲಿದ್ದೇವೆ ಎಂದು ಪೋಸ್ಟ್ ಹಾಕುವುದರ ಮೂಲಕ ತಿಳಿಸಿದ್ದಾರೆ. ಯಶ್ ಮತ್ತು ರಾಧಿಕಾ ಜೋಡಿಯಾಗಿ ಸಮುದ್ರದ ದಡದಲ್ಲಿ ನಡೆದುಕೊಂಡು ಬರುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. 'ಈಗ ನಾವು ಇಬ್ಬರು ಮಾತ್ರ ಅಲ್ಲ ನಾವು ಮೂವರು' ಎಂದು ಟಾಗ್ ಲೈನ್ ಕೂಡ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.