Publish Date: Sat, 27 Jul 2019 (14:03 IST)
Updated Date: Sat, 27 Jul 2019 (14:05 IST)
ಐತಿಹಾಸಿಕ ದೇವಾಲಯದಲ್ಲಿ ತಡರಾತ್ರಿ ನಡೆಯಬಾರದ ಘಟನೆ ನಡೆದುಹೋಗಿದ್ದು, ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.
ಐತಿಹಾಸಿಕ ದೇವಾಲಯದಲ್ಲಿ ನಗ ನಾಣ್ಯ ಲೂಟಿ ಮಾಡಲಾಗಿದೆ.
ರಾಮನಗರ ಜಿಲ್ಲೆ ರಾಮನಗರದ ಐತಿಹಾಸಿಕ ದೇಗುಲ ರಾಮದೇವರ ಬೆಟ್ಟದ ದೇವಾಲಯದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.
ರಾಮನಗರದ ಹೊರವಲಯದಲ್ಲಿರುವ ರಾಮದೇವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ತಡರಾತ್ರಿ ದೇವಾಲಯದ ಬಾಗಿಲು ಒಡೆದಿದ್ದಾರೆ. ಹುಂಡಿಯಲ್ಲಿದ್ದ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರಾಮನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಬಂಧನಕ್ಕೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ರು.