Publish Date: Fri, 26 Jul 2019 (18:40 IST)
Updated Date: Fri, 26 Jul 2019 (18:43 IST)
ಹನಿಟ್ರಾಪ್ ಮೂಲಕ ಅರ್ಚಕರಿಂದ ಲಕ್ಷಾಂತರ ಹಣ ದೋಚಲು ಮುಂದಾಗಿದ್ದ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರನ್ನ ಬಳಸಿ ಅಶ್ಲೀಲ ವಿಡಿಯೋ ತಯಾರಿಸಿ ಆ ಮೇಲೆ ಹಣಕ್ಕಾಗಿ ಈ ಗ್ಯಾಂಗ್ ಬ್ಲಾಕ್ ಮೇಲ್ ಮಾಡುತ್ತಿತ್ತು. ಹೆಬ್ರಿ ಠಾಣೆಯ ಪೊಲೀಸರು ಹನಿ ಟ್ರಾಪ್ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಹೆಬ್ರಿ ಬೇಳಿಂಜೆ ಗ್ರಾಮದ ಸುಮಾ ಉರ್ಫ್ ಸುನಂದಾ ಮತ್ತು ಜನ್ನಾಡಿ ನಿವಾಸಿ ಕಿರಣ್ ಯಾನೆ ಶಶಾಂಕ್ ಶೆಟ್ಟಿ ಬಂಧಿತರು.
ಹೆಬ್ರಿ ಅರ್ಧನಾರೀಶ್ವರದ ದೇವಸ್ಥಾನದ ಅರ್ಚಕ ರಮೇಶ್ ಎಂಬುವರ ಹತ್ತಿರ ಭವಿಷ್ಯ ಕೇಳೋಕೆ ಅಂತ ಸುಮಾ ತೆರಳಿದ್ದರು.
ಆಗ ಎದೆಯಲ್ಲಿ ತುರಿಕೆಯಾಗುತ್ತಿದೆ ನೋಡಿ ಅಂತ ಅರ್ಚಕರಿಗೆ ಹೇಳಿದ್ದಾಳೆ. ಅದನ್ನು ನೋಡೋವಾಗ ವಿಡಿಯೋ ಮಾಡಿಕೊಂಡು ಆ ಬಳಿಕ ವಿಡಿಯೋ ತೋರಿಸಿ 80 ಸಾವಿರ ರೂಪಾಯಿ ಪಡೆದುಕೊಂಡಿದ್ದರು.
ಮತ್ತೆ 40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆ ಬಳಿಕ ಠಾಣೆ ಮೆಟ್ಟಿಲೇರಿದ ಅರ್ಚಕರ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.