Publish Date: Wed, 24 Jul 2019 (17:06 IST)
Updated Date: Wed, 24 Jul 2019 (17:07 IST)
ಅಸಲಿ ಪೊಲೀಸರನ್ನು ಮೀರಿಸುವಂತೆ ಬಂದಿದ್ದ ನಕಲಿ ಪೊಲೀಸರು ಯಾಮಾರಿಸಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.
ಕಳ್ಳತನ ಹೆಚ್ಚಾಗುತ್ತಿವೆ. ಚಿನ್ನಾಭರಣಗಳನ್ನು ಜೇಬಿನಲ್ಲಿಟ್ಟುಕೊಳ್ಳಿ ಎಂದು ಇಬ್ಬರು ವ್ಯಕ್ತಿಗಳಿಗೆ ನಕಲಿ ಪೊಲೀಸರು ಹೇಳಿದ್ದಾರೆ.
ಅವರ ಮಾತನ್ನ ನಂಬಿದ ವಸಂತ ಹಾಗೂ ವಿಠ್ಠಲ್ ಎಂಬುವರು ತಮ್ಮ ಬಳಿಯಿದ್ದ 45 ಗ್ರಾಂ ಚಿನ್ನಾಭರಣಗಳನ್ನು ತೆಗೆಯುತ್ತಿರುವಾಗ ಅವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಚಿನ್ನಾಭರಣ ತೆಗೆಯೋ ಮುಂಚೆ ತಾವು ಪೊಲೀಸ್ ಇರೋದಾಗಿ ಐಡಿ ಕಾರ್ಡ್ ನ್ನು ಖದೀಮರು ತೋರಿಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಹೊರವಲಯದ ವಿದ್ಯಾಗಿರಿಯಲ್ಲಿ ಈ ಘಟನೆ ನಡೆದಿದೆ.