Publish Date: Sat, 13 Jul 2019 (16:19 IST)
Updated Date: Sat, 13 Jul 2019 (16:20 IST)
ಮನೆಯಲ್ಲಿದ್ದ ಜನರನ್ನು ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಕಟ್ಟಿ ಹಾಕಿ ಮಾಡಬಾರದ ಕೆಲಸವನ್ನು ಮಾಡಲಾಗಿದೆ.
ಮನೆ ಮಂದಿ ಮೇಲೆ ಹಲ್ಲೆ ನಡೆಸಿ 80 ಗ್ರಾಮ್ ಚಿನ್ನಾಭರಣ ಹಾಗೂ 10 ಸಾವಿರ ನಗದು ಮತ್ತು ಇತರೆ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರಭಾಗದಲ್ಲಿರೋ ಶಹಾಪುರ ರಸ್ತೆಯಲ್ಲಿನ ನಮಾಜಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.
ಮುಸುಕುಧಾರಿ ಐವರು ದರೋಡೆಕೋರರು ನಸುಕಿನ 1 ಗಂಟೆ ಹೊತ್ತಿಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ರಾಜೇಂದ್ರಪ್ಪ ಶಿರಶ್ಯಾಡ ಹಾಗೂ ಅವರ ಪತ್ನಿ, ಮಕ್ಕಳಿಬ್ಬರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಈ ಕುರಿತು ಜೇವರ್ಗಿ ಠಾಣೆಯಲ್ಲಿ ದೂರು ದಾಖಲಾಗಿದೆ.