Publish Date: Fri, 26 Jul 2019 (18:30 IST)
Updated Date: Fri, 26 Jul 2019 (18:32 IST)
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿಯನ್ನು ಯಡಿಯೂರಪ್ಪನವರಿಗೆ ಬೋಧಿಸಿದರು.
ಮೈತ್ರಿ ಸರಕಾರ ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ವಿಫಲವಾದ ಬಳಿಕ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಸರಕಾರ ರಚನೆಗೆ ಅವಕಾಶ ಕೋರಿದ್ರು.
ಅದರಂತೆ ಇಂದು ಸಂಜೆ 6.30ಕ್ಕೆ ಮುಖ್ಯಮಂತ್ರಿಯಾಗಿ ಹಸಿರು ಶಾಲು ಹೊದ್ದು ಬಿ.ಎಸ್.ಯಡಿಯೂರಪ್ಪ ಪದಗ್ರಹಣ ಮಾಡಿದ್ರು.
ಯಡಿಯೂರಪ್ಪನವರಿಗೆ ದೇವರ ಪ್ರಸಾದ ನೀಡಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಶುಭ ಕೋರಿದ್ರು. ಬಿಜೆಪಿ ಶಾಸಕರು, ಮಾಜಿ ಸಚಿವರು, ಮುಖಂಡರು ಪಾಲ್ಗೊಂಡಿದ್ರು.
ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ನ ಉಚ್ಛಾಟಿತ ಶಾಸಕ ರೋಷನ್ ಬೇಗ್ ಮತ್ತಿತರರು ಪಾಲ್ಗೊಂಡಿದ್ರು.