Publish Date: Fri, 26 Jul 2019 (16:27 IST)
Updated Date: Fri, 26 Jul 2019 (16:28 IST)
ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ತಮ್ಮ ಇಂಗ್ಲೀಷ್ ಹೆಸರಿನಲ್ಲಿ ಬದಲಾವಣೆ ಮಾಡಿರುವುದು ಬಹಿರಂಗವಾಗಿದೆ.
ಅವರ ಮೊದಲ ಹೆಸರು ಯಡಿಯೂರಪ್ಪ ಇತ್ತು. ಆದರೆ, ಕಳೆದ 2007ರಲ್ಲಿ ತಮ್ಮ ಇಂಗ್ಲೀಷ್‌ನಲ್ಲಿರುವ ಹೆಸರಿನಲ್ಲಿ (I) ಬದಲಿಗೆ (D) ಜೋಡಿಸಲಾಗಿತ್ತು. ಇದರಿಂದಾಗಿ ಯಡ್ಯೂರಪ್ಪ ಆಗಿತ್ತು. ಇದೀಗ ತಮ್ಮ ಹಳೆಯ ಹೆಸರನ್ನೇ ಮುಂದುವರಿಸಲು ನಿರ್ಧರಿಸಲಾಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಆರು ತಿಂಗಳುಗಳ ಹಿಂದೆಯೇ ಯಡಿಯೂರಪ್ಪ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.