Publish Date: Fri, 26 Jul 2019 (11:59 IST)
Updated Date: Fri, 26 Jul 2019 (12:14 IST)
ಮೈತ್ರಿ ಸರಕಾರವನ್ನು ಕೆಳಗೆ ಇಳಿಸಿರೋ ಬಿ.ಎಸ್.ಯಡಿಯೂರಪ್ಪ ಸಿಎಂ ಆಗೋದಾದ್ರೆ ಆಗಲಿ. ಅದಕ್ಕೆ ನಮ್ಮದೇನೂ ತಕರಾರಿಲ್ಲ. ಹೀಗಂತ ಮಾಜಿ ಸಚಿವ. ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ವಿಧಾನಸಭೆಯಲ್ಲಿ ಅಗತ್ಯ ಸಂಖ್ಯಾಬಲವಿಲ್ಲ. ಆದರೂ ಅಧಿಕಾರಕ್ಕಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಅವರ ಸ್ಟ್ರಾಟಜಿ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹಣಕಾಸಿನ ಮಸೂದೆ ಪಾಸಾಗಬೇಕಿದೆ. ಅದಕ್ಕೆ ಕಾಂಗ್ರೆಸ್ ಸಹಕಾರ ನೀಡುತ್ತದೆ ಎಂದ ಡಿ.ಕೆ.ಶಿವಕುಮಾರ್, ಆಪರೇಷನ್ ಕಮಲ ಹಾಗೂ ಸ್ಪೀಕರ್, ಅನರ್ಹತೆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಸರಿಯಾಗಿ ಮಾತನಾಡುವೆ ಎಂದು ಟಾಂಗ್ ನೀಡಿದ್ದಾರೆ.
ಅತೃಪ್ತ ಶಾಸಕರು ಮೈತ್ರಿ ಸರಕಾರ ಬಿದ್ದ ಮೇಲೆ ಸಂಪೂರ್ಣ ತೃಪ್ತರಾಗಿದ್ದಾರೆ. ಆ 15 ಜನರ ಜತೆಗೆ ಪ್ರಮಾಣ ವಚನ ಸ್ವೀಕಾರ ಮಾಡೋದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಏನೇನು ಮಾಡುತ್ತಾರೆ ಮತ್ತು ಏನೆಲ್ಲಾ ಮಾಡ್ತಾರೆ ಅನ್ನೋದನ್ನು ನೋಡೋಣ ಎಂದು ಕಿಡಿಕಾರಿದ್ರು.
Jagadeesh
Publish Date: Fri, 26 Jul 2019 (11:59 IST)
Updated Date: Fri, 26 Jul 2019 (12:14 IST)