Publish Date: Thu, 25 Jul 2019 (18:19 IST)
Updated Date: Thu, 25 Jul 2019 (18:20 IST)
ರಾಜ್ಯದ ರಾಜಕೀಯ ಎಲ್ಲರ ಗಮನ ಸೆಳೆದಿರೋವಂತೆ ಬಿಜೆಪಿಗೆ ಅಧಿಕಾರ ಸಿಗೋದಿಲ್ಲ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿರೋದು ಪುಷ್ಟೀಕರಿಸುತ್ತಿದೆ.
ರಾಜ್ಯದ ರಾಜಕೀಯ ಬೆಳವಣಿಗೆ ದಿಕ್ಕಿಲ್ಲದೇ ಸಾಗುತ್ತಿದೆ. ಇಂಥದ ಸಮಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಸುಭದ್ರ ಆಡಳಿತ ನೀಡೋದಿಲ್ಲ. ಹೀಗಂತ ಹಂಗಾಮಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶಾಸಕ ರಾಮಲಿಂಗಾರೆಡ್ಡಿ ನಿವಾಸದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜಕೀಯ ದಿಕ್ಕು ಬದಲಾಗಲಿದೆ. ಮುಂದೇನು ಆಗಲಿದೆ ಅಂತ ಕಾದು ನೋಡಿ ಅಂತ ಸ್ಫೋಟಕ ಸುದ್ದಿ ಸಿಡಿಸಿದ್ರು.
ಹೆಚ್.ಡಿ.ಕುಮಾರಸ್ವಾಮಿ ಈ ಹೇಳಿಕೆಯು ವಿಭಿನ್ನವಾದ ಅರ್ಥಗಳಲ್ಲಿ ವಿಶ್ಲೇಷಣೆಗೆ ಒಳಪಡುತ್ತಿದೆ.