Publish Date: Wed, 24 Jul 2019 (15:15 IST)
Updated Date: Wed, 24 Jul 2019 (15:16 IST)
ವಿಶ್ವಾಸಮತ ಯಾಚನೆಯಲ್ಲಿ ಸೋಲುಕಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಕುಮಾರಸ್ವಾಮಿ ಮತ್ತೆ ಇನ್ನೊಂದು ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ. ಹೀಗಂತ ಚರ್ಚೆ ನಡೆಯುತ್ತಿವೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಇಂದು ಖ್ಯಾತ ಜ್ಯೋತಿಷಿ ರಹೀಂ ಉಲ್ಲಾಖಾನ್ ನಿಯಾಜಿ ಭೇಟಿ ನೀಡಿದ್ರು.
ಹೈದರಾಬಾದ್ ನ ಈ ಪ್ರಖ್ಯಾತ ಜ್ಯೋತಿಷಿ ರಾಜ್ಯದಲ್ಲಿ ಕೆಲವೇ ತಿಂಗಳಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ. ಬಿಜೆಪಿ ಸರಕಾರ ಶೀಘ್ರ ಪತನಗೊಳ್ಳುತ್ತದೆ. ಮುಂದಿನ ಬಾರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂತ ಭವಿಷ್ಯ ಹೇಳಿದ್ದಾರೆ.