Select Your Language

Notifications

webdunia
webdunia
webdunia
webdunia

ಪ್ರಮಾಣ ವಚನಕ್ಕೆ ಹೈಕಮಾಂಡ್ ಸೂಚನೆಗೆ ಕಾಯುತ್ತಿರುವ ಯಡಿಯೂರಪ್ಪ

ಪ್ರಮಾಣ ವಚನಕ್ಕೆ ಹೈಕಮಾಂಡ್ ಸೂಚನೆಗೆ ಕಾಯುತ್ತಿರುವ ಯಡಿಯೂರಪ್ಪ
ಬೆಂಗಳೂರು , ಬುಧವಾರ, 24 ಜುಲೈ 2019 (07:26 IST)
ಬೆಂಗಳೂರು: ನಿನ್ನೆ ವಿಶ್ವಾಸಮತದಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲಾಗುತ್ತಿದ್ದಂತೇ ಬಹುದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದೆ.


ಮೂಲಗಳ ಪ್ರಕಾರ ಈಗಾಗಲೇ ರಾಜ್ಯಪಾಲರು ಬಿಜೆಪಿ ನಾಯಕ ಯಡಿಯೂರಪ್ಪಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಗುರುವಾರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಆದರೆ ಇದಕ್ಕೂ ಮೊದಲು ಹೈಕಮಾಂಡ್ ನ ನಿರ್ದೇಶನಕ್ಕಾಗಿ ಯಡಿಯೂರಪ್ಪ ಕಾಯುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರ ರಚನೆ ರೂಪುರೇಷೆಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಈಗಾಗಲೇ ಯಡಿಯೂರಪ್ಪ ಸಲಹೆ ಕೇಳಿದ್ದು, ಇದಕ್ಕೆ ಹೈಕಮಾಂಡ್ ನಿಂದ ಉತ್ತರ ಬರಬೇಕಿದೆ. ಅದಾದ ಬಳಿಕ ಪ್ರಮಾಣ ವಚನ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ