Publish Date: Tue, 23 Jul 2019 (10:34 IST)
Updated Date: Tue, 23 Jul 2019 (10:37 IST)
ಬೆಂಗಳೂರು: ರಾಜೀನಾಮೆ ಸಲ್ಲಿಕೆ ಕುರಿತಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ನೀಡಿದ್ದ ಸೂಚನೆಗೆ ಅತೃಪ್ತರು ಪ್ರತಿಕ್ರಿಯಿಸಿದ್ದು, ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ.
ಅನರ್ಹತೆ ಕುರಿತಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಸ್ಪೀಕರ್ ಇಂದು ಸೂಚಿಸಿದ್ದರು. ಆದರೆ ತಕ್ಷಣಕ್ಕೆ ಬೆಂಗಳೂರಿಗೆ ಬಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ನಮಗೆ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು ಎಂದು ಅತೃಪ್ತರು ಮನವಿ ಮಾಡಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಅತೃಪ್ತರಿಗೆ ನೋಟಿಸ್ ನೀಡಲಾಗಿತ್ತು.