ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಇಂದು ಆಗಲ್ಲ ಎಂದ ಸುಪ್ರೀಂಕೋರ್ಟ್

ಸೋಮವಾರ, 22 ಜುಲೈ 2019 (10:50 IST)
ಬೆಂಗಳೂರು: ಪಕ್ಷೇತರ ಶಾಸಕರ  ಅರ್ಜಿ ಕುರಿತಾದ ವಿಚಾರಣೆ ಇಂದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಇಂದೂ ವಿಧಾನಸಭೆ ಕಲಾಪದಲ್ಲಿ ವಿಶ್ವಾಸ ಮತ ಯಾಚನೆಯಾಗುವುದು ಸಂಶಯ ಎಂದೇ ಹೇಳಬಹುದು.


ನಾಳೆ ಪಕ್ಷೇತರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ಹೀಗಾಗಿ ವಿಧಾನಸಭೆಯಲ್ಲಿ ಮೊನ್ನೆಯಂತೇ ಮೈತ್ರಿ ಪಕ್ಷಗಳು ಚರ್ಚೆ ನಡೆಸುತ್ತಲೇ ಒಂದು ದಿನ ತಳ್ಳುವ ಸಾಧ್ಯತೆಯಿದೆ.

ಇಂದು ಸಾಧ್ಯವಾಗದಿದ್ದರೆ ನಾಳೆ ಮೊದಲ ಪ್ರಕರಣವಾಗಿ ವಿಚಾರಣೆ ಕೈಗೆತ್ತಿಕೊಳ್ಳಿ ಎಂದು ಶಾಸಕರ ಪರ ವಕೀಲ್ ಮುಕುಲ್ ರೋಹ್ಟಗಿ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸುಪ್ರೀಂಕೋರ್ಟ್ ನಾಳೆ ವಿಚಾರಣೆ ನಡೆಸಲು ಪ್ರಯತ್ನಿಸುವುದಾಗಿ ಹೇಳಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ ಇಂದು ಆಗಲ್ಲ ಎಂದ ಸುಪ್ರೀಂಕೋರ್ಟ್