ಇಂದೂ ವಿಶ್ವಾಸ ಮತ ನಡೆಯೋದು ಡೌಟು?!

ಸೋಮವಾರ, 22 ಜುಲೈ 2019 (08:53 IST)
ಬೆಂಗಳೂರು: ವಿಶ್ವಾಸ ಮತ ನಡೆಯುವುದು ಡೌಟು ಎಂದೇ ಹೇಳಲಾಗುತ್ತಿದೆ. ಇಂದೂ ಕೂಡಾ ವಿಶ್ವಾಸ ಮತ ಚರ್ಚೆ ನಡೆಸುತ್ತಾ ಕಾಲಹರಣ ಮಾಡಲು ಮೈತ್ರಿ ಪಕ್ಷಗಳು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.


ಇಂದೂ ಕೂಡಾ ಹಲವರು ಚರ್ಚೆಗೆ ಸಮಯ ಕೇಳಿದ್ದು ಈ ಮೂಲಕ ಇಂದೂ ಕೂಡಾ ಸ್ಪೀಕರ್ ಮತಕ್ಕೆ ಹಾಕಲು ಸಾಧ್ಯವಾಗುತ್ತದೆ ಎನ್ನಲಾಗದು. ಸುಪ್ರೀಂ ಕೋರ್ಟ್ ಇಂದು ಎರಡು ಅರ್ಜಿಗಳ ವಿಚಾರಣೆ ನಡೆಸಲಿದ್ದು, ಅದು ತಮಗೆ ಜೀವದಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ಪಕ್ಷಗಳಿದೆ.

ಈ ಕಾರಣಕ್ಕಾಗಿಯೇ ಆದಷ್ಟು ವಿಳಂಬ ದೋರಣೆ ಅನುಸರಿಸುವ ತಂತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಜೋತು ಬೀಳಬಹುದು. ಒಂದು ವೇಳೆ ದೋಸ್ತಿ ಪಕ್ಷಗಳು ಈ ರೀತಿ ಮಾಡಿದರೆ ಇಂದೂ ಬಿಜೆಪಿ ಸುಮ್ಮನೆ ಕೂರಬಹುದು ಎನ್ನಲಾಗದು. ಮೈತ್ರಿ ಪಕ್ಷಗಳ ವಿರುದ್ಧ ಸಿಡಿದೆದ್ದು ಆರಂಭದಲ್ಲೇ ಮತಕ್ಕೆ ಹಾಕಲು ಪಟ್ಟು ಹಿಡಿಯಬಹುದು. ಒಟ್ಟಾರೆ ಇಂದಿನ ಕಲಾಪ ಕುತೂಹಲ ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆಯಬ್ಬಳು ಪಾದ್ರಿಯನ್ನು ವೇದಿಕೆ ಮೇಲಿಂದ ತಳ್ಳಿದ್ದೇಕೆ ಗೊತ್ತಾ?