Publish Date: Sun, 21 Jul 2019 (11:05 IST)
Updated Date: Sun, 21 Jul 2019 (11:14 IST)
ನವದೆಹಲಿ: ನಿನ್ನೆ ನಿಧನರಾದ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಂತಿಮ ವಿಧಿವಿಧಾನಗಳು ಇಂದು ನೆರವೇರಲಿದೆ.
ಪ್ರಧಾನಿ ಮೋದಿ, ಸುಷ್ಮಾ ಸ್ವರಾಜ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಅಗಲಿದ ನಾಯಕಿಯ ಅಂತಿಮ ದರ್ಶನ ಪಡೆದಿದ್ದಾರೆ.
ಇಂದು ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಕಾಂಗ್ರೆಸ್ ನ ಅಗ್ರ ನಾಯಕಿಯರ ಸಾಲಿನಲ್ಲಿ ಬರುವ ಶೀಲಾ ದೀಕ್ಷಿತ್ ಗೆ 81 ವರ್ಷ ವಯಸ್ಸಾಗಿತ್ತು.